ಪಿ.ವಿ.ಸಿಂಧು ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವದ 7ನೇ ಅಟಗಾರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

PV-Sindu
ಮುಂಬೈ, ಆ.22- ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇಡೀ ದೇಶವನ್ನೇ ತನ್ನತ್ತ ತಿರುಗುವಂತೆ ಮಾಡಿದ್ದ ಬ್ಯಾಡ್ಮಿಂಟನ್ ತಾರೆ ಈಗ ಅತ್ಯಂತ ಸಂಭಾವನೆ ಪಡೆಯುವ ವಿಶ್ವದ 7ನೆ ಅಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಟೆನ್ನಿಸ್ ಲೋಕದ ದಿಗ್ಗಜೆ ಸರೀನಾ ವಿಲಿಯಮ್ಸ್ 18.1 ಮಿಲಿಯನ್ ಡಾಲರ್ ಪಡೆಯುವ ಮೂಲಕ ಅತ್ಯಧಿಕ ಸಂಭಾವನೆ ಪಡೆಯುವ ಆಟಗಾರ್ತಿ ಆಗಿದ್ದಾರೆ ಎಂದು ಫೋರ್ಬ್ಸ್ ಹೊರಡಿಸಿರುವ ಪಟ್ಟಿಯಲ್ಲಿ ಪ್ರಕಟಗೊಂಡಿದೆ.
ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು ಆಟದ ಸಂಭಾವನೆಯೊಂದಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ರೂಪದಲ್ಲಿ 8.5 ಮಿಲಿಯನ್ ಡಾಲರ್ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

2016ರ ಒಲಂಪಿಕ್ಸ್‍ನಲ್ಲಿ ಬೆಳ್ಳಿ ಗೆದ್ದ ಮೊದಲ ಮಹಿಳಾ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಸಿಂಧು, ಬ್ರಿಡ್ಜ್ ಸ್ಟೋನ್, ಗಾಟೋರೇಡ್, ನೋಕಿಯಾ, ಪ್ಯಾನೋಸೋನಿಕ್, ರೆಕ್‍ಟಿಕ್ ಸೇರಿದಂತೆ ಸುಮಾರು 6ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿಯಾಗಿದ್ದು ಅದರಿಂದ 8 ಮಿಲಿಯನ್ ಡಾಲರ್‍ನಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ, 5 ಲಕ್ಷ ಡಾಲರ್ ಪ್ರಶಸ್ತಿಗಳ ಮೊತ್ತದ ರೂಪದಲ್ಲಿ ಬಂದಿದೆ.

ಟಾಪ್ 10 ಹೆಚ್ಚು ಸಂಭಾವನೆ ಪಡೆದ ಆಟಗಾರ್ತಿಯರು:
1) ಸರೆನಾ ವಿಲಿಯಮ್ಸ್ -18.1 ಮಿಲಿಯನ್ ಡಾಲರ್
2.ಕಾರ್ಲೊಲಿನೋ ಹೋಜ್‍ನಿಯಾಕಿ- 13 ಮಿಲಿಯನ್ ಡಾಲರ್
3) ಸೊಯಾನೇ ಸ್ಟೇಫಿಸ್- 11.2 ಮಿಲಿಯನ್ ಡಾಲರ್
4) ಗರ್‍ಬಿನಾ ಮುಗುರುಜಾ- 11 ಮಿಲಿಯನ್ ಡಾಲರ್
5) ಮರೀನಾ ಶರಪೋವಾ-10.5 ಮಿಲಿಯನ್ ಡಾಲರ್
6) ವಿನಸ್ ವಿಲಿಯಮ್ಸ್- 10.2 ಮಿಲಿಯನ್ ಡಾಲರ್
7) ಪಿ.ವಿ.ಸಿಂಧು- 8.5 ಮಿಲಿಯನ್ ಡಾಲರ್.
8) ಸಿಮೊನಾ ಹೆಲ್ಪ್- 7.7 ಮಿಲಿಯನ್ ಡಾಲರ್
9) ಡೆನಿಕಾ ಪ್ಯಾಟ್ರಿಕ್- 7.5 ಮಿಲಿಯನ್ ಡಾಲರ್
10) ಎನ್‍ಜಿಲಿಕ್ಯೂ ಕಿರ್‍ಬಿರ್- 7 ಮಿಲಿಯನ್ ಡಾಲರ್.
ಇಷ್ಟೊಂದು ದೊಡ್ಡ ಸಂಭಾವನೆ ಪಡೆದರೂ ಕೂಡ ಫೋರ್ಬ್ಸ್ ಪ್ರಕಟಿಸಿದ ವಿಶ್ವದ 100 ಅತಿ ಹೆಚ್ಚು ಸಂಭಾವನೆ ಪಡೆಯುವವರ ಸಾಲಿನಲ್ಲಿ ಯಾವುದೇ ಮಹಿಳಾ ಅಥ್ಲೇಟಿಕ್ಸ್‍ಗಳಿಗೆ ಸ್ಥಾನ ದೊರೆತಿಲ್ಲ.

Facebook Comments

Sri Raghav

Admin