ಬಿಜೆಪಿ ಮುಖಂಡನನ್ನ ಗುಂಡಿಟ್ಟು ಹತ್ಯೆ ಮಾಡಿದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

BJP-Leader--01

ಪುಲ್ವಾಮ (ಪಿಟಿಐ), ಆ.22-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ.  ರಾಖ್-ಎ-ಲಿಟರ್ ಗ್ರಾಮದ ನಿವಾಸಿ ಶಬ್ಬೀರ್ ಅಹಮದ್ ಭಟ್ ಉಗ್ರಗಾಮಿಗಳ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿ ಸ್ಥಳೀಯ ನಾಯಕ.   ಇಂದು 2.30ರ ನಸುಕಿನಲ್ಲಿ ಗ್ರಾಮದಲ್ಲಿ ಉಗ್ರರು ಶಬ್ಬೀರ್ ಮೇಲೆ ಗುಂಡು ಹಾರಿಸಿ ಕೊಂದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಬ್ಬೀರ್ ಅವರನ್ನು ಮಂಗಳವಾರ ಸಂಜೆ ಉಗ್ರರು ಅಪಹರಿಸಿದ್ದರು. ಅವರ ಪತ್ತೆಗಾಗಿ ನಿನ್ನೆಯಿಂದಲೇ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಇಂದು ಮುಂಜಾನೆ ಅವರ ಮನೆ ಸಮೀಪವೇ ಮೃತದೇಹ ಪತ್ತೆಯಾಗಿದೆ. ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಕಳೆದ ವಾರ ಸರ್ಕಾರವು ನಗರಸಭೆ ಮತ್ತು ಪಂಚಾಯಿ ಚುನಾವಣೆಗಳನ್ನು ಪ್ರಕಟಿಸಿದ ನಂತರ ಕಣಿವೆ ರಾಜ್ಯದಲ್ಲಿ ರಾಜಕೀಯ ಪಕ್ಷವೊಂದರ ಮುಖಂಡನ ಮೊದಲ ಹತ್ಯೆ ನಡೆದಿದೆ.

ಕೆಲವು ತಿಂಗಳ ಹಿಂದೆ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಿಜೆಪಿ ಯುವ ನಾಯಕ ಗೋವ್ಹರ್ ಅಹಮದ್ ಭಟ್(30) ಅವರನ್ನು ಉಗ್ರಗಾಮಿಗಳು ಗುಂಡಿಟ್ಟು ಕೊಂದಿದ್ದರು.

Facebook Comments

Sri Raghav

Admin