ಇಂದಿನ ಪಂಚಾಗ ಮತ್ತು ರಾಶಿಫಲ (22-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಜೇನುತುಪ್ಪ ಸಿಗುತ್ತದೆಂದು ಉತ್ಸಾಹದಿಂದಿರುವ ಮೂರ್ಖನು, ಕಣಿವೆಯಲ್ಲಿ ಬಿದ್ದು ಸಾಯುವೆನೆಂದು ತಿಳಿಯಲಾರ. ನಿಂದಿತವಾದ ಕೆಲಸವನ್ನು ಮಾಡುವವನು ನರಕಕ್ಕಾಗಿ ಹೆದರುವುದಿಲ್ಲ. -ದೇವೀಭಾಗವತ

Rashi
ಪಂಚಾಂಗ : 22.08.2018 ಬುಧವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ ಮ.03.42 / ಚಂದ್ರ ಅಸ್ತ ರಾ.03.23
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ಬೆ.7.41)
ನಕ್ಷತ್ರ: ಪೂರ್ವಾಷಾಢ (ರಾ.3.39) / ಯೋಗ: ಪ್ರೀತಿ (ಸಾ.5.02)
ಕರಣ: ಭದ್ರೆ-ಭವ (ಬೆ.7.41-ರಾ.8.58) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 06

ಇಂದಿನ ವಿಶೇಷ:

# ರಾಶಿ ಭವಿಷ್ಯ
ಮೇಷ : ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ
ವೃಷಭ : ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ
ಮಿಥುನ: ಆತುರಪಟ್ಟು ಅವಕಾಶ ವಂಚಿತರಾಗದಿರಿ
ಕಟಕ : ಕೆಲಸಗಳು ಸುಗಮವಾಗಿ ಆಗುವುದು. ಮನಸ್ಸಿನ ಪ್ರಶಾಂತತೆಗೆ ಸ್ನೇಹಿತರೊಂದಿಗೆ ಬೆರೆಯಿರಿ
ಸಿಂಹ: ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ
ಕನ್ಯಾ: ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ
ತುಲಾ: ವಾಕ್ಚತುರ್ಯದಿಂದ ಕಾರ್ಯಸಿದ್ಧಿ, ವಿರೋಧಿಗಳಿಂದ ಹೊಗಳಿಕೆ
ವೃಶ್ಚಿಕ : ನೂತನ ಬಂಡವಾಳ ಹೂಡಿಕೆಗೆ ಯೋಜನೆ
ಧನುಸ್ಸು: ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು.
ಮಕರ: ಬಂಧುಗಳ ಆಗಮನ ಸಾಧ್ಯತೆ
ಕುಂಭ: ಕಾರ್ಯಗಳಲ್ಲಿ ಜಯ, ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರ
ಮೀನ: ಅನಾರೋಗ್ಯದಿಂದ ಬಳಲಿಕೆ, ಅಧಿಕ ಖರ್ಚು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments