ವಿಶ್ವದ ವಿವಿಧೆಡೆ ಬಕ್ರೀದ್ ಸಂಭ್ರಮ, ಮೆಕ್ಕಾದಲ್ಲಿ ಸಾಮೂಹಿಕ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

Mekka

ನವದೆಹಲಿ (ಪಿಟಿಐ), ಆ.22-ತ್ಯಾಗ, ಬಲಿದಾನಗಳ ಸಂಕೇತವಾದ ಈದ್-ಉಲ್-ಅಧಾವನ್ನು(ಬಕ್ರೀದ್) ಇಂದು ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಹಜ್ ಯಾತ್ರೆ ಕೈಗೊಂಡಿರುವ ಲಕ್ಷಾಂತರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಈದ್ ಸಂದೇಶ ವಿನಿಮಯ ಮಾಡಿಕೊಂಡರು.

ಇಸ್ರೇಲ್‍ನ ಜೆರಸಲೆಂನ ಮುಸ್ಲಿಮರ ಪವಿತ್ರ ಸ್ಥಳದಲ್ಲಿ ಈದ್ ಆಚರಣೆ ನಡೆಯಿತು. ಪಾಕಿಸ್ತಾನ, ಬಾಂಗ್ಲಾದೇಶ, ಕೊಲ್ಲಿ ರಾಷ್ಟ್ರಗಳು, ಮಧ್ಯಪ್ರಾಚ್ಯದ ದೇಶಗಳು ಸೇರಿದಂತೆ ವಿಶ್ವದ ವಿವಿಧೆಡೆ ಈದ್ ಆಚರಿಸಲಾಗಿದೆ. ಲಕ್ಷಾಂತರ ಮಹಮದೀಯರು ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಂಡರು. ಕೆಲವು ಸ್ಥಳಗಳಲ್ಲಿ ಉಗ್ರಗಾಮಿಗಳ ದಾಳಿ ಆತಂಕದ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿತ್ತು.

Facebook Comments

Sri Raghav

Admin