ಕಾಶ್ಮೀರದಲ್ಲಿ ಬಕ್ರೀದ್ ದಿನವೂ ಯೋಧರ ಮೇಲೆ ಕಲ್ಲು ತೂರಾಟ..!

ಈ ಸುದ್ದಿಯನ್ನು ಶೇರ್ ಮಾಡಿ

Srinagar

ಶ್ರೀನಗರ(ಪಿಟಿಐ), ಆ.22- ಬಲಿದಾನ ಸ್ಮರಿಸುವ ದಿನವಾದ ಬಕ್ರೀದ್ ಹಬ್ಬದ ದಿನ ಕೂಡ ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಯಾಗಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬೀದಿಗಿಳಿದ ಪ್ರತಿಭಟನಾಕಾರರು ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಪಾಕಿಸ್ತಾನ ಮತ್ತು ಇಸಿಸ್ ಉಗ್ರ ಸಂಘಟನೆ ಧ್ವಜ ಪ್ರದರ್ಶಿಸಿ ಅಟ್ಟಹಾಸ ಮೆರೆದಿದ್ದಾರೆ. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಜಂಗ್ಲತ್ ಮಂಡಿ ಎಂಬಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ ಬಳಿಕ ರಸ್ತೆಗಳಿಗೆ ಬಂದ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಮತ್ತು ಉಗ್ರ ಸಂಘಟನೆಯ ಧ್ವಜನ್ನು ಹಾರಿಸಿ ದೇಶದ್ರೋಹಿ ಕೃತ್ಯವೆಸಗಿದ್ದಾರೆ. ಇದಲ್ಲದೆ, ಭದ್ರತೆ ನೀಡುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ

Facebook Comments