ಪ್ರವಾಹದಿಂದ ಪರಿತಪಿಸುತ್ತಿರುವ ಕೇರಳಿಗರಿಗೆ ಈಗ ವಿಷಜಂತುಗಳ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

Kerala--01
ತಿರುವನಂತಪುರಂ, ಆ.22-ಮಹಾಮಳೆ ಮತ್ತು ಜಲಪ್ರಳಯದಿಂದ ಚೇತರಿಸಿಕೊಳ್ಳುತ್ತಿರುವ ಕೇರಳ ಜನತೆ ಮುಂದೆ ಈಗ ಅನೇಕ ಸವಾಲುಗಳು ಎದುರಾಗಿವೆ. ಮಳೆ ಕಡಿಮೆಯಾಗಿ, ಪ್ರವಾಹದ ನೀರು ಇಳಿಮುಖವಾದ ನಂತರ ಪರಿಹಾರ ಕೇಂದ್ರಗಳಿಂದ ತಮ್ಮ ಮನೆಗಳತ್ತ ತೆರಳಿದ ಸಂತ್ರಸ್ತರಿಗೆ ವಿಷ ಸರ್ಪಗಳು, ಮೊಸಳೆಗಳು, ಇತರೆ ಸರೀಸೃಪಗಳು ಸ್ವಾಗತ ಕೋರುತ್ತಿವೆ. ಇದೇ ವೇಳೆ ವಿವಿಧೆಡೆ ಹಾವು ಕಚ್ಚಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ವರದಿಗಳು ಇವೆ.
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಚಲಕುಡಿ ಮನೆಗೆ ತೆರಳಿದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮೊಸಳೆ ವಾಸ್ತವ್ಯ ಹೂಡಿದ್ದನ್ನು ನೋಡಿ ಹೌಹಾರಿ ಹೊರಗೆ ಓಡಿ ಬಂದರು. ನಂತರ ಸ್ಥಳೀಯರ ಸಹಾಯದಿಂದ ಈ ಆತಂಕಕಾರಿ ಅತಿಥಿಯನ್ನು ಹಗ್ಗದಿಂದ ಸೆರೆ ಹಿಡಿಯಲಾಗಿದೆ. ತ್ರಿಶೂರ್, ಅಳಪುಳ, ಪಟ್ಟಣಂತಿಟ್ಟ, ಇಡುಕ್ಕಿ, ಕೋಳಿಕೋಡ್, ಎರ್ನಾಕುಲಂ, ಮಲಪ್ಪುರಂ, ವಯನಾಡ್ ಜಿಲ್ಲೆಗಳು ಪ್ರವಾಹದಿಂದ ಅತಿ ಹೆಚ್ಚು ತೊಂದರೆಗೆ ಒಳಗಾದ ಪ್ರದೇಶಗಳಾಗಿವೆ. ತಮ್ಮ ನೆಲೆಗಳಿಗೆ ಹಿಂದಿರುಗಿ ಹೊಸ ಬದುಕು ಕಟ್ಟಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದ ಜನರಿಗೆ ಅನಿರೀಕ್ಷಿತ ಅತಿಥಿಗಳ ವಾಸ್ತವ್ಯ ಆತಂಕ ಉಂಟು ಮಾಡಿವೆ.

Kerala--02

ಅನೇಕ ಮನೆಗಳಲ್ಲಿ ಹಾವುಗಳು, ಇತರ ಸರಿಸೃಪಗಳು, ಕ್ರಿಮಿ-ಕೀಟಗಳು ನೆಲೆಸಿರುವುದು ಸಂತ್ರಸ್ಥರಲ್ಲಿ ಭೀತಿ ಮೂಡಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಇಂಥ ಪ್ರಾಣಿಗಳನ್ನು ಸ್ವಸ್ಥಾನಗಳಿಗೆ ಓಡಿಸುವ ಕಾರ್ಯವೂ ಮುಂದುವರಿದಿದೆ.

Kerala--03

Facebook Comments

Sri Raghav

Admin