ಮಳೆಯಿಂದ ಕೆಎಸ್‌ಆರ್‌ಟಿಸಿಗೆ 3.42 ಕೋಟಿ ರೂ. ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

KSRTC

ಬೆಂಗಳೂರು, ಆ.22- ಮಂಗಳೂರು-ಬೆಂಗಳೂರು ನಡುವೆ ಕೆಎಸ್‍ಆರ್‍ಟಿಸಿ ಬಸ್ ಸೇವೆಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯವಾಗಿದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಕೂಡ ನಿಲ್ಲಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ. ಚಾರ್ಮುಡಿ ಘಾಟ್ ಮೂಲಕ ಕುದುರೆಮುಖ, ಶಿವಮೊಗ್ಗ ಮಾರ್ಗವಾಗಿ ಕೆಲವು ಬಸ್‍ಗಳನ್ನು ಮಾತ್ರ ಸಂಚಾರಕ್ಕೆ ಬಿಡಲಾಗಿದೆ. ಮಡಿಕೇರಿಗೆ ಒಟ್ಟು 62 ಬಸ್‍ಗಳಲ್ಲಿ 49 ಕಾರ್ಯ ನಿರ್ವಹಿಸುತ್ತಿದೆ. ಮಳೆ ಹಾವಳಿಯಿಂದ ಕೆಎಸ್‍ಆರ್‍ಟಿಸಿಗೆ 3.42 ಕೋಟಿ ನಷ್ಟವಾಗಿದೆ ಎಂದು ತಿಳಿಸಲಾಗಿದೆ.

Facebook Comments

Sri Raghav

Admin