ಮಂತ್ರಾಲಯದಲ್ಲಿ ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Heart-Attack

ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ. ಬೆಂಗಳೂರು ಕೇಂದ್ರ ಡಿಪೋಗೆ ಸೇರಿದ ಬಸ್ ಮಂತ್ರಾಲಯಕ್ಕೆ ತೆರಳಿತ್ತು. ಚಾಲಕ ಶಂಕರ್‍ಗೆ ಬಸ್‍ನಲ್ಲೇ ಹೃದಯಾಘಾತವಾಗಿದೆ. ಕೂಡಲೇ ಸಹ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲನೆ ವೇಳೆ ಏನಾದರೂ ಹೃದಯಾಘಾತವಾಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Facebook Comments

Sri Raghav

Admin