ಮುಂಬೈ ಕ್ರಿಸ್ಟಲ್ ಟವರ್’ನಲ್ಲಿ ಬೆಂಕಿ ಅವಘಡಲ್ಲಿ ಉಸಿರುಗಟ್ಟಿ ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mumabi-Fire--011

ಮುಂಬೈ(ಪಿಟಿಐ), ಆ.22- ವಾಣಿಜ್ಯ ನಗರಿ ಮುಂಬೈನ ದಾದರ್‍ನ ಪರೇಲ್ ಪ್ರದೇಶದಲ್ಲಿರುವ ಬಹುಮಹಡಿ ಕ್ರಿಸ್ಟಲ್ ಟವರ್‍ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಉಸಿರುಗಟ್ಟಿ ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ.  ಬಹುಮಹಡಿ ಕಟ್ಟಡದ ವಿವಿಧ ಅಂತಸ್ತುಗಳಲ್ಲಿ ಸಿಲುಕಿದ್ದ ಅನೇಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ರಕ್ಷಿಸಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ಹಿಂದ್‍ಮಾತಾ ಸಿನಿಮಾ ಬಳಿ ಇರುವ 17 ಅಂತಸ್ತುಗಳ ಕ್ರಿಸ್ಟಲ್ ಟವರ್‍ನ 12ನೇ ಮಹಡಿಯಲ್ಲಿ ಇಂದು ಬೆಳಗ್ಗೆ 8.30ರಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಅಗ್ನಿಯ ಕೆನ್ನಾಲಿಗೆ 13, 14, ಮತ್ತು 15ನೆ ಮಹಡಿಗೂ ವ್ಯಾಪಿಸಿತ್ತು ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಸ್ಥ ರಹಂಗದಾಳೆ ತಿಳಿಸಿದ್ದಾರೆ.  ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನಗಳು ಹಾಗೂ ನಾಲ್ಕು ವಾಟರ್ ಟ್ಯಾಂಕರ್‍ಗಳೊಂದಿಗೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸಿದರು. ಪೊಲೀಸರೂ ಸಹ ಈ ಕಾರ್ಯಾಚರಣೆಯಲ್ಲಿ ನೆರವಾದರು. ಬೆಂಕಿ ಜ್ವಾಲೆಗಳು ಸಂಪೂರ್ಣ ನಂದಿಸಲಾಗಿದೆ. ದಟ್ಟ ಹೊಗೆಯನ್ನು ಶಮನಗೊಳಿಸುವ ಕಾರ್ಯ(ಕೂಲಿಂಗ್ ಆಪರೇಷನ್) ಮುಂದುವರಿದಿದೆ.

ಹೊಗೆಯಿಂದ ಉಸಿರುಗಟ್ಟಿ ಅಸ್ವಸ್ಥರಾದ 15ಕ್ಕೂ ಹೆಚ್ಚು ಮಂದಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin