ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ಮಾಡಿದ 7 ವಿದ್ಯಾರ್ಥಿಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ARREST

ಬೆಂಗಳೂರು, ಆ.22- ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ 7 ಮಂದಿ ಎಂಜಿನಿಯರ್ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಮಲ್, ಅಜೇಯ್‍ಟಾಮ್, ಮೊಹಮ್ಮದ್ ಫಾದಲ್, ನಜೀತ್, ನಜೀದ್, ಸಾಹೇಲ್, ಅಮಲ್ ಬೆನ್ನಿ ಬಂಧಿತ ಆರೋಪಿಗಳು.

ಕಳೆದ 10 ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಸೇರಿದ್ದ ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಆರೋಪಿಗಳು ಹಾಸ್ಟೆಲ್ ಕೊಠಡಿಗೆ ಕರೆಸಿಕೊಡು ಡ್ಯಾನ್ಸ್ ಮಾಡುವಂತೆ ಪೀಡಿಸಿದ್ದರು. ಜೊತೆಗೆ ಕೊಠಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದರು. ಈ ವಿಷಯವನ್ನು ಕಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‍ನ ವಾರ್ಡನ್‍ಗೆ ತಿಳಿಸಿದ್ದರು. ವಾರ್ಡನ್ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 7 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

Facebook Comments