ಪಾಕ್ ಸೇನಾ ಮುಖ್ಯಸ್ಥನನ್ನ ತಬ್ಬಿಕೊಂಡ ಸಿದ್ದುಗೆ ‘ಶಾಟ್‍ಗನ್’ ಸಪೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Shatrugna--01

ಕೋಲ್ಕತ್ತಾ (ಪಿಟಿಐ), ಆ.22- ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದಕ್ಕಾಗಿ ತೀವ್ರ ವಾಗ್ದಾಳಿಗೆ ಒಳಗಾಗಿರುವ ಮಾಜಿ ಕ್ರಿಕೆಟ್ ಪಟು ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಶತ್ರುಘ್ನ ಸಿನ್ಹಾ ಬೆಂಬಲ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಹವರ್ತಿಗಳನ್ನು (ಪಾಕಿಸ್ತಾನದ ಪ್ರಧಾನಮಂತ್ರಿಗಳು) ಆಲಂಗಿಸಿಕೊಂಡಿದ್ದರು. ಹೀಗಿರುವಾಗ ನವಜೋತ್ ಸಿಧು ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದರಲ್ಲಿ ಯಾವ ತಪ್ಪು ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಅಭಿನೇತ ‘ಶಾಟ್‍ಗನ್’ಹೇಳಿದ್ದಾರೆ.

ಕೊಲ್ಕತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಸಿಧು ಈಗಾಗಲೇ ಸ್ಪಷ್ಟಪಡಿಸಿದ್ಧಾರೆ. ಈ ವಿವಾದವನ್ನು ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಶತ್ರುಘ್ನ ಸಿನ್ಹಾ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ತಿರುಗೇಟು ನೀಡಿದ್ದಾರೆ.   ಸಮಯ ಸಿಕ್ಕಾಗಲೆಲ್ಲಾ ಬಿಜೆಪಿ ಮುಖಂಡರ ವಿರುದ್ಧ ಧ್ವನಿ ಎತ್ತುವ ಶತ್ರುಘ್ನ ಈಗ ಸಿಧು ವಿಷಯದಲ್ಲೂ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದಾರೆ.

Sidhu--01

Facebook Comments

Sri Raghav

Admin