ಕೊಡಗಿನಲ್ಲಿ ಕೊಚ್ಚಿಹೋಗಿದ್ದ ತಾಯಿ-ಮಗನ ಶವ ಕೆಸರಿನಲ್ಲಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Kodagu-rain

ಮಡಿಕೇರಿ, ಆ.22 : ಭಾರಿ ಮಳೆ ವೇಳೆ ಭೂ ಕುಸಿತದಲ್ಲಿ ಮನೆ ಸಮೇತ ಕೊಚ್ಚಿಹೋಗಿದ್ದ ತಾಯಿ ಮಗನ ಶವ ಹೆಮ್ಮೆತಾಳು ಬಳಿ ಕೆಸರಿನಲ್ಲಿ ಪತ್ತೆಯಾಗಿದೆ. ಚಂದ್ರಾವತಿ ಮತ್ತು ಉಮೇಶ್ ಅವರ ಮೃತ ದೇಹವನ್ನ ಇಂದು ಮಧ್ಯಾಹ್ನ ಸೇನಾ ಪಡೆ ಪತ್ತೆ ಹಚ್ಚಿದೆ. ಕಳೆದ ಒಂದು ವಾರದ ಹಿಂದೆ ಭಾರಿ ಮಳೆಯಿಂದಾಗಿ ಮಡಿಕೇರಿಯ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು ಹಲವಾರು ಗ್ರಾಮಗಳೇ ಮಣ್ಣಿನಲ್ಲಿ ಹುದುಗಿ ಹೋಗಿತ್ತು. ಸೇನಾ ಪಡೆ ಹಾಗೂ ರಾಜ್ಯದ ಅಗ್ನಿಶಾಮಕ, ಎನ್ ಡಿ ಆರ್ ಎಫ್ ಮತ್ತು ಪರಿಹಾರ ಕಾರ್ಯಾಚರಣೆ ಸಿಬ್ಬಂದಿಗಳು ನೂರಾರು ಮಂದಿಯನ್ನ ರಕ್ಷಿಸಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ನಾಪತ್ತೆಯಾಗಿರುವವರ ಬಗ್ಗೆ ವಿವಿಧೆಡೆ ಇನ್ನು ಕಾರ್ಯಾಚರಣೆ ಮುಂದುವರೆದಿದೆ.

Facebook Comments