ಮಾರಾಕಾಸ್ತ್ರಗಳಿಂದ ಕೊಚ್ಚಿ ಕುಡುಕ ಕುಡುಕ ಮಗನನ್ನು ಕೊಂದ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

Family-Murder--01

ಮದ್ದೂರು, ಆ.22- ಕುಡುಕ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೋಣನಹಳ್ಳಿ ತಿಟ್ಟಿನಲ್ಲಿ ನಿನ್ನೆ ರಾತ್ರಿ ಜರುಗಿದೆ.
ಗ್ರಾಮದ ಹಾಲಿನ ಕೃಷ್ಣಪ್ಪನ ಮಗ ವಾಸು(26) ಕೊಲೆಯಾದ ಯುವಕ, ಈತನನ್ನು ತಂದೆ ಕೃಷ್ಣಪ್ಪ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದು, ಪೊಲಿಸರು ಕೃಷ್ಣಪ್ಪನನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ವಾಸು ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ, ನಿನ್ನೆಯೂ ಸಹ ಅತಿಯಾಗಿ ಕುಡಿದು ಬಂದು ತಂದೆ ಕೃಷ್ಣಪ್ಪ ನೊಂದಿಗೆ ಹಣ ಹಾಗೂ ಆಸ್ತಿ ವಿಚಾರವಾಗಿ ಜಗಳ ತೆಗೆದಿದ್ದ. ಅಲ್ಲದೆ ಜಗಳ ವಿಕೋಪಕ್ಕೆ ತಿರುಗಿದಾಗ ವಾಸು ತಂದೆ ಕೃಷ್ಣಪ್ಪನ ಮೇಲೆ ಹಲ್ಲೆ ನಡೆಸಿದ್ದನು.  ಆಕ್ರೋಶಗೊಂಡ ಕೃಷ್ಣಪ್ಪ ಮಾರಕಾಸ್ತ್ರಗಳಿಂದ ವಾಸುಗೆ ಹೊಡೆದು ಹತ್ಯೆ ಮಾಡಿ, ಆತನ ಶವವನ್ನು ಮನೆಯ ಮುಂದೆ ಎಸೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದನು. ಅನುಮಾನಗೊಂಡ ಪೊಲಿಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ತಾನೆ ಎಂದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸೆಂಟ್ರಲ್ ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments