ಗಿನ್ನಿಸ್ ದಾಖಲೆ ಸೃಷ್ಟಿಸಿದ ಲೈನ್ ಡ್ಯಾನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ds-2

ಇಂಡೋನೆಷ್ಯಾದಲ್ಲಿ ಅದ್ಭುತ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಸಹಸ್ರಾರು ಶ್ವೇತವಸ್ತ್ರಧಾರಿ ಜನರು ಲೈನ್ ಡ್ಯಾನ್ಸ್ ಮೂಲಕ ನೂತನ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.  ದ್ವೀಪರಾಷ್ಟ್ರ ಇಂಡೋನೆಷ್ಯಾ ರಾಜಧಾನಿ ಜಕಾರ್ತದಲ್ಲಿ ಹೊಸ ವಿಶ್ವ ದಾಖಲೆಯಿಂದ ಪುಳಕಗೊಂಡಿದೆ.. 18ನೇ ಏಷ್ಯನ್ ಗೇಮ್ಸ್‍ಗೆ ಮುನ್ನವೇ ಅಲ್ಲಿ ಗಿನ್ನಿಸ್ ದಾಖಲೆ ನಿರ್ಮಾಣವಾಗಿರುವುದು ವಿಶೇಷ.

ds-1

ಜಕಾರ್ತದ ನ್ಯಾಷನಲ್ ಪ್ಯಾಲೇಸ್‍ನಿಂದ ದಕ್ಷಿಣ ಜಕಾರ್ತದ ವಾಣಿಜ್ಯ ಜಿಲ್ಲೆವರೆಗೂ 8 ಕಿಲೋಮೀಟರ್‍ಗಳ ತನಕ 65,000 ಜನರು ಸಾಲಾಗಿ ನಿಂತು ಪ್ರೋಕೋ-ಪ್ರೋಕೋ ಎಂಬ ಲೈನ್ ಡ್ಯಾನ್ಸ್ ಮಾಡಿದರು. ಇದಕ್ಕಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದು ಪೂರ್ವ ಇಂಡೋನೆಷ್ಯಾದ ಸುಲವೇಸಿ ಪ್ರಾಂತ್ಯದ ಜನಪ್ರಿಯ ಪ್ರಾಚೀನ ಗೆರೆ ನೃತ್ಯ. ಪ್ರೋಕೋ-ಪ್ರೋಕೋ ಡ್ಯಾನ್ಸ್ ಮೂಲಕ ದ್ವೀಪರಾಷ್ಟ್ರದ ಸಾಂಸ್ಕೃತಿಕ ಸೌಂದರ್ಯವನ್ನು ಪ್ರವರ್ತನಗೊಳಿಸುವುದು ಇದರ ಉದ್ದೇಶವಾಗಿತ್ತು. ಜಕಾರ್ತ ಮತ್ತು ಪಲೇಮ್‍ಬ್ಯಾಂಗ್ ನಗರಗಳಲ್ಲಿ ನಡೆಯುತ್ತಿರುವ 18ನೇ ಏಷ್ಯಾ ಕ್ರೀಡಾಕೂಟದಲ್ಲಿ 45 ದೇಶಗಳ ಸುಮಾರು 12,000 ಕ್ರೀಡಾಪಟುಗಳು ಭಾಗವಹಿಸಿದ್ಧಾರೆ.

ds

Facebook Comments

Sri Raghav

Admin