ಕೇರಳದ ಜನರ ಪುನರ್ವಸತಿಗೆ 1ಕೋಟಿ ರೂ. ನೀಡಿದ ನಟ ರಾಘವ ಲಾರೆನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Kerala--01
ಬೆಂಗಳೂರು, ಆ.23- ಪ್ರವಾಹ ಮತ್ತು ಭೂ ಕುಸಿತದಿಂದ ತತ್ತರಿಸಿರುವ ಕೇರಳದ ಜನತೆಗೆ ಪುನರ್ವಸತಿ ಕಲ್ಪಿಸಲು ಒಂದು ಕೋಟಿ ರೂ. ನೀಡುವುದಾಗಿ ತಮಿಳು ಚಿತ್ರರಂಗದ ಖ್ಯಾತ ನಟ ರಾಘವ ಲಾರೆನ್ಸ್ ಘೋಷಿಸಿದ್ದಾರೆ. ಕೇರಳದಲ್ಲಿ ನಮ್ಮ ಸಹೋದರ ಸಹೋದರಿಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಆದ್ದರಿಂದ ನಾನು ನೇರವಾಗಿ ಅಲ್ಲಿಗೆ ತೆರಳಿ ಜನರ ಸೇವೆ ಮಾಡಲು ಇಚ್ಛಿಸಿದ್ದೇನೆ ಎಂದು ರಾಘವ ಟ್ವೀಟ್ ಮಾಡಿದ್ದಾರೆ.

ಕೇರಳಕ್ಕೆ ಭೇಟಿ ನೀಡುವ ಸಂಬಂಧ ಅಲ್ಲಿನ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ. ಅವರು ಸಮಯ ನೀಡಿದ ಕೂಡಲೆ ಅವರನ್ನು ಭೇಟಿಯಾಗಿ ಪರಿಹಾರ ಧನ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Kerala--01

Facebook Comments

Sri Raghav

Admin