93 ವರ್ಷದ ಅಜ್ಜಿಯ ಪ್ಯಾರಾ ಗ್ಲೈಡಿಂಗ್ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ds
ಸಾಹಸಕ್ಕೆ ವಯೋಮಾನ ಅಡ್ಡಿಯಾಗದು. 93ರ ಇಳಿ ವಯಸ್ಸಿನಲ್ಲೂ ರೋಚಕ ಸಾಹಸ ಸಾಧ್ಯ ಎಂಬುದನ್ನು ತೈವಾನ್‍ನ ಅಜ್ಜಿಯೊಬ್ಬರು ಸಾಧಿಸಿ ಸಾಬೀತು ಮಾಡಿದ್ದಾರೆ. ಇಷ್ಟಕ್ಕೂ ಈ ವಯೋವೃದ್ಧೆ ಮಾಡಿದ ಮೈನವಿರೇಳಿಸುವ ಸಾಹಸವಾದರೂ ಏನು..? ಕುತೂಹಲವೇ..? ನೀವೇ ನೋಡಿ! ಇವರ ಹೆಸರು ವು ರುಯಿ-ಲಿನ್. ವಯಸ್ಸು 93 ವರ್ಷ. ತೈವಾನ್‍ನ ಈ ಹಿರಿಯ ಜೀವ ಹವ್ಯಾಸಿ ಪ್ಯಾರಾಗ್ಲೈಡರ್. ತೈವಾನ್‍ನ ತೈತುಂಗ್ ನಗರದ ಆಗಸದಲ್ಲಿ ಈ ಇಳಿವಯಸ್ಸಿನಲ್ಲೂ ಇವರು ಪ್ಯಾರಾ ಗ್ಲೈಡಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ds-1

ಥ್ರಿಲ್ ಬಯಸುವ ಇಷ್ಟು ವಯಸ್ಸಾದ ಗ್ರಾಹಕರನ್ನು ನಾವು ಈವರೆಗೆ ನೋಡಿಯೇ ಇಲ್ಲ ಎಂದು ಪ್ಯಾರಾಗ್ಲೈಡಿಂಗ್ ಕಂಪನಿ ವು ರುಯಿ-ಲಿನ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದೆ. ನೀಲಾಗಸದಲ್ಲಿ ಅತ್ಯಂತ ಖುಷಿಯಿಂದ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಎಲ್ಲರತ್ತ ಕೈಬೀಸಿ ಈ ಅಜ್ಜಿ ಚಕಿತಗೊಳಿಸಿದರು.  ಬಾನಂಗಳದಲ್ಲಿ ನಡೆದ ಈ ಸಾಹಸದೊಂದಿಗೆ ಪ್ಯಾರಾಗ್ಲೈಡಿಂಗ್ ಮಾಡಿದ ತೈವಾನ್‍ನ ಅತ್ಯಂತ ಹಿರಿಯ ಉತ್ಸಾಹಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.  ಶತಾಯುಷ್ಯ ಸಮೀಪದಲ್ಲಿರುವ ಈ ಹಿರಿಯ ಮಹಿಳೆಗೆ ಇದು ಎರಡನೇ ಪ್ಯಾರಾ ಗ್ಲೈಡಿಂಗ್ ಸಾಹಸ. ಈ ಹಿಂದೆಯೂ ಅವರು ಆಗಸದಲ್ಲಿ ಹಕ್ಕಿಯಂತೆ ಹಾರಾಡಿದ್ದರು. ತಮಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಮತ್ತೊಮ್ಮೆ ಪ್ಯಾರಾಗ್ಲೈಡ್ ಮಾಡುವ ಬಯಕೆ ಇವರದ್ದು. ಶತಾಯುಷಿಯಾದಾಗ ಉಚಿತ ರೈಡ್ ವ್ಯವಸ್ಥೆ ಮಾಡುವುದಾಗಿ ಇವರಿಗೆ ಪ್ಯಾರಾಗ್ಲೈಡಿಂಗ್ ಕಂಪನಿ ಭರವಸೆ ನೀಡಿದೆ.

Facebook Comments

Sri Raghav

Admin