ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಮರು ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly--0121

ನವದೆಹಲಿ (ಪಿಟಿಐ), ಆ.23-ಮೂತ್ರಪಿಂಡ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಅರುಣ್ ಜೇಟ್ಲಿ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಹಣಕಾಸು ಸಚಿವರಾಗಿ ಮರು ನೇಮಕ ಮಾಡಿದ್ದಾರೆ. ಜೇಟ್ಲಿ ಇಂದು ಅಧಿಕೃತವಾಗಿ ವಿತ್ತ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಧಾನಮಂತ್ರಿ ಅವರ ಸಲಹೆ ಮೇರೆಗೆ ಭಾರತದ ರಾಷ್ಟ್ರಪತಿ ಅವರು ಅರುಣ್ ಜೇಟ್ಲಿ ಅವರಿಗೆ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳನ್ನು ನೀಡಲು ನಿರ್ದೇಶನ ನೀಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಂಸತ್ ಭವನದ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಜೇಟ್ಲಿ ಇಂದು ಈ ಎರಡೂ ಖಾತೆಗಳ ಸಚಿವರಾಗಿ ಪದಗ್ರಹಣ ಮಾಡಿದರು.

ಮೇ 14ರಂದು ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದೇ ದಿನ ಅವರ ಖಾತೆಗಳನ್ನು ಕೇಂಧ್ರ ಸಚಿವ ಪಿಯೂಷ್ ಗೋಯೆಲ್ ಮಧ್ಯಂತರ ಅವಧಿಗೆ ನಿಭಾಯಿಸಿದ್ದರು.

Facebook Comments

Sri Raghav

Admin