ಬಿಟ್ ಕಾಯಿನ್ ವಂಚಕ ಅರೆಸ್ಟ್ : ಬೆಂಗಳೂರಲ್ಲೂ ಸಾವಿರ ಕೋಟಿಗೂ ಹೆಚ್ಚು ಮೋಸ..!

ಈ ಸುದ್ದಿಯನ್ನು ಶೇರ್ ಮಾಡಿ

Bitcoin--01

ಬೆಂಗಳೂರು,ಆ.23- ದೆಹಲಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಬಿಟ್ ಕಾಯಿನ್ ವಂಚಕ ದಿವೇಶ್ ದರ್ಜಿಯನ್ನು ನಗರಕ್ಕೆ ಕರೆತರಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರಲ್ಲೂ ಸಾವಿರ ಕೋಟಿಗೂ ಹೆಚ್ಚು ಮೋಸ ಮಾಡಿರುವ ಈತ ಸದ್ಯ ಗುಜರಾತ್ ಪೊಲೀಸರ ವಶದಲ್ಲಿದ್ದಾನೆ. ಆತನನ್ನು ಬಾಡಿ ವಾರೆಂಟ್ ಮೂಲಕ ಬೆಂಗಳೂರಿಗೆ ತರಲು ಪೊಲೀಸರ ತಂಡವೊಂದು ಗುಜರಾತ್‍ಗೆ ತೆರಳಿದೆ.

ದೇಶಾದ್ಯಂತ ರಾಜಕಾರಣಿಗಳು, ಉದ್ಯಮಿಗಳಿಗೆ ವಂಚಿಸಿರುವ ಶತಕೋಟಿ ಮೋಸಗಾರ ದಿವೇಶ್ ದರ್ಜಿ ಬಿಟ್ ಕನೆಕ್ಟ್ ಕಂಪನಿಯ ಮುಖ್ಯಸ್ಥನಾಗಿದ್ದಾನೆ. ಈ ಕಂಪನಿಯ ಮೂಲಕ 90 ಸಾವಿರ ರೂ. ಕೋಟಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ಹಣ ದ್ವಿಗುಣಗೊಳಿಸುವುದಾಗಿ ಹೇಳಿ ವಂಚಿಸುತ್ತಿದ್ದ ಈತ ದುಬೈಯಿಂದ ಬರುತ್ತಿದ್ದಾಗ ದೆಹಲಿ ಪೊಲೀಸರು ಬಂಧಿಸಿದ್ದರು.

Facebook Comments

Sri Raghav

Admin