ಚಿತ್ರಮಂದಿರದಲ್ಲಿ ಕ್ಲಿಕ್ಕಿಸಿ “ಲೈಫ್ ಜೊತೆ ಒಂದು ಸೆಲ್ಫಿ”..!

ಈ ಸುದ್ದಿಯನ್ನು ಶೇರ್ ಮಾಡಿ

LifeJoteOnduSelfikannada

ಬೆಳ್ಳಿ ಪರದೆ ಮೇಲೆ ಈ ವಾರ ಗೆಳೆಯರು ಸೆಲ್ಫಿಯನ್ನು ಹಿಡಿಯುತ್ತ ಬರುತ್ತಿದ್ದಾರೆ. ಹೇಳಿ ಕೇಳಿ ಇದು ಸೆಲ್ಫಿ ಯುಗ. ಯುವಕರಿಗಷ್ಟೇ ಅಚ್ಚುಮೆಚ್ಚಿನ ಸೆಲ್ಫಿ ಅಲ್ಲ ಹಿರಿಯರು ಕೂಡಾ ಇದಕ್ಕೆ ಮರುಳಾಗಿಬಿಟ್ಟಿದ್ದಾರೆ. ಲೈಫ್ ಜೊತೆ ಸೆಲ್ಫಿ ಚಿತ್ರ ದಿನಕರ್ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ಆಗಿದೆ. ಅವರ ಪತ್ನಿ ಮಾನಸಾ ದಿನಕರ್ ಅವರು ಕಥೆಯನ್ನು ಒದಗಿಸಿದ್ದಾರೆ. ಪ್ರೀತಿ ಸ್ನೇಹಗಳ ಸುತ್ತ ಹಣೆಯಲ್ಪಟ್ಟ ಸೂಕ್ಷ್ಮ ಕಥಾ ಹಂದರಕ್ಕೆ ನಿರ್ದೇಶಕ ದಿನಕರ್ ತೂಗುದೀಪ ಮುದ್ದಾದ ಪತ್ರವರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಸುಧಾರಾಣಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದಾರೆ. ಸಾಧು ಕೋಕಿಲ,  ಚಿತ್ರ ಶೆಣೈ, ದೀಪಕ್ ಶೆಟ್ಟಿ
ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಲವ್ಲಿ ಸ್ಟಾರ್ ಪ್ರೇಮ್‍ಕುಮಾರ್, ಮಾದಕ ಬೆಡಗಿ ಹರಿಪ್ರಿಯಾ ಹಾಗೂ ಸುಂದರ ಯುವಕ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದ ಚಿತ್ರಕ್ಕೆ ವಿರಾಟ್ ಸಾಯಿ ಕ್ರಿಯೇಷನ್ ನಿರ್ಮಾಣದಲ್ಲಿ ಸಮೃದ್ಧಿ ಮಂಜುನಾಥ್ (ಕೋಲಾರ) ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿರುವ ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಮೇಲೆ ಬರುತ್ತಿದೆ.

Life-Jote-Ondu-Selfi

Facebook Comments

Sri Raghav

Admin