ಟೆಲಿಫೋನ್ ನಿಗಮದಲ್ಲಿ ಹಲವು ಹುದ್ದೆಗಳ ಭರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

MTNL
ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (ಎಂಟಿಎನ್’ಎಲ್) ನ ಮಾನವ ಸಂಪನ್ಮೂಲ, ಮಾರುಕಟ್ಟೆ ಮತ್ತು ಹಣಕಾಸು ವಿಭಾಗಗಳಿಗೆ ಸಹಾಯಕ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 38
ಹುದ್ದೆಗಳ ವಿವರ
1.ಮಾನವ ಸಂಪನ್ಮೂಲ ವಿಭಾಗ (ಹೆಚ್’ಆರ್) – 06
2.ಮಾರುಕಟ್ಟೆ ವಿಭಾಗ – 15
3.ಹಣಕಾಸು ವಿಭಾಗ – 17
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಎಂಬಿಎ / ಎಂಎಸ್’ಡಬ್ಲ್ಯೂ / ಎಂಎ ಕ್ರ.ಸಂ 2ರ ಹುದ್ದೆಗೆ ಎಂಬಿಎ, ಕ್ರ. ಸಂ 3ರ ಹುದ್ದೆಗೆ ಸಿಎ, ಐಸಿಡಬ್ಲ್ಯೂಎ / ವಾಣಿಜ್ಯ ಪದವಿ ಜೊತೆ ಸಿಎ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಕ್ರ.ಸಂ 1 ಮತ್ತು 2ರ ಹುದ್ದೆಗೆ ಕನಿಷ್ಠ 23 ಗರಿಷ್ಠ 30 ವರ್ಷ, ಕ್ರ ಸಂ 3ರ ಹುದ್ದೆಗೆ ಕನಿಷ್ಠ 20 ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1000 ರೂ, ಪ.ಜಾ, ಪ.ಪಂ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 500 ರೂ, ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವಬ್ ಸೈಟ್ ವಿಳಾಸ  www.mtnl.net.in  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin