‘ಬಾಂಗ್ಲಾ ಮುಸ್ಲಿಮರಿಗೆ, ಬಂಗಾಳ ಹಿಂದುಗಳಿಗೆ’ : ಸಂಸದೆ ರೂಪಾ ಗಂಗೂಲಿ ವಿವಾದಿತ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Roopa-ganguly

ಕೋಲ್ಕತ್ತಾ (ಪಿಟಿಐ), ಆ.23-ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಸಂಸದರು ಮತ್ತು ಮುಖಂಡರಿಗೆ ಪಕ್ಷದ ವರಿಷ್ಠರು ತಾಕೀತು ಮಾಡಿದ್ದರೂ, ಇಂಥ ಪ್ರಕರಣಗಳು ಮುಂದುವರಿದಿವೆ. ಈಗ ವಿವಾದಾತ್ಮಕ ಹೇಳಿಕೆ ನೀಡಿದ ಸರದಿ ಮಾಜೀ ಚಿತ್ರನಟಿ ಹಾಗೂ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರದ್ದಾಗಿದೆ.

1947ರಲ್ಲಿ ದೇಶ ವಿಭಜನೆ ನಂತರ ಪಾಕಿಸ್ತಾನವು ಮುಸ್ಲಿಮ್ ದೇಶವಾಗಿದ್ದು, ಬಾಂಗ್ಲಾದೇಶವೂ ಕೂಡ ಮುಸಲ್ಮಾನರಿಗೆ ಮೀಸಲಾಗಿದೆ. ಪಶ್ಚಿಮ ಬಂಗಾಳ ಭಾರತದ ಒಂದು ಭಾಗವಾಗಿದ್ದು, ಇದು ಹಿಂದುಗಳಿಗೆ ಮಾತ್ರ ಮೀಸಲಾಗಿದೆ ಎಂದು ರೂಪ ಸುದ್ದಿಗಾರರಿಗೆ ಹೇಳಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ಕರಡು ಪಟ್ಟಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೂಪಾ, ಹಿಂದು ಮತ್ತು ಮುಸ್ಲಿಮರು ಪ್ರತ್ಯೇಕಗೊಳ್ಳಬೇಕೆಂಬ ಉದ್ದೇಶದಿಂದಲೇ ದೇಶ ವಿಭಜನೆಯಾಯಿತು. ಪಶ್ಚಿಮ ಬಂಗಾಳ ಹಿಂದುಗಳಿಗೆ ಸೀಮಿತ. ಇಲ್ಲಿ ಹಿಂದುಗಳು ನಿರಾಶ್ರಿತರಲ್ಲ. ಬಾಂಗ್ಲಾ ಮುಸ್ಲಿಮರಿಗೆ ಮಾತ್ರ ಸೀಮಿತ. ವಿಶ್ವದ ವಿವಿಧ ಭಾಗಗಳಿಂದ ಬಂದ ಬೌದ್ಧರು ಮತ್ತು ಜೈನರು ನಿರಾಶ್ರಿತರು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

Facebook Comments

Sri Raghav

Admin