ಥಿಯೇಟರ್’ಗೆ ಶಿಫ್ಟ್ ಆದ “ಸರ್ಕಾರಿ ಹಿ.ಪ್ರಾ.ಶಾಲೆ”

ಈ ಸುದ್ದಿಯನ್ನು ಶೇರ್ ಮಾಡಿ

Sarkari-hiriya-pratamika-pa

ತೆರೆ ಮೇಲೆ ಮತ್ತೊಂದು ವಿಭಿನ್ನ ಪ್ರಯತ್ನದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿಂದೆ ರಿಕ್ಕಿ ಹಾಗೂ ಕಿರಿಕ್ ಪಾರ್ಟಿಗಳಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ರಿಷಬ್ ಶೆಟ್ಟಿ ಈಗ ಮಕ್ಕಳ ಕಥೆಯಾಧಾರಿತ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಕಾಸರಗೋಡಿನಲ್ಲಿ ಇರುವ ಒಂದು ಕನ್ನಡ ಶಾಲೆಯ ಬಗ್ಗೆ ಹೇಳಲು ಬರುತ್ತಿದ್ದಾರೆ ರಿಷಬ್. ಚಿತ್ರದ ಕುರಿತು ಮಾತನಾಡಿದ ರಿಷಬ್ ಶೆಟ್ಟಿ ಈ ಸಿನಿಮಾ ನನಗೆ ತೀರ ಹತ್ತಿರವಾದ ಸಿನಿಮಾ. ಇದರಲ್ಲಿ ಅನಂತನಾಗ್ ಅವರು ನಟಿಸಿರುವುದೇ ನನಗೆ ತುಂಬಾ ಸಂತೋಷ ಕೊಟ್ಟಿದೆ.
ಇದೊಂದು ಮಕ್ಕಳ ಬಗ್ಗೆ ಇರುವ ಚಿತ್ರ. ಎಂಟು ತಿಂಗಳ ಹಿಂದೆಯೇ ಎಲ್ಲ ಮಕ್ಕಳಿಗೂ ವರ್ಕ್ ಶಾಪ್ ಆಯೋಜಿಸಲಾಗಿತ್ತು. ತುಂಬಾ ತಾಳ್ಮೆಯಿಂದ ಈ ಚಿತ್ರವನ್ನು ಮಾಡಲಾಗಿದೆ. ನನಗೆ ಕನ್ನಡದ ಮೇಲೆ ಅತಿಯಾದ ಪ್ರೀತಿ.

SarKari _(135)

ಹಾಗಾಗಿ ಸರ್ಕಾರಿ ಕನ್ನಡ ಮೀಡಿಯಂ ಶಾಲೆಗಳ ಬಗ್ಗೆ ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನ ನಮ್ಮದು. ಈ ಚಿತ್ರದಲ್ಲಿ ತುಂಟತನವಿದೆ, ಪ್ರೀತಿಯಿದೆ, ದುಃಖವಿದೆ ಹಾಗೂ ಒಂದು ಹೋರಾಟವಿದೆ. ಚಿತ್ರದ ಟ್ರೇಲರ್‍ಗೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನಿಂಗ್ ಪ್ರಗತಿ ಮಾಡಿದ್ದಾರೆ. ಡೈಲಾಗ್‍ಗಳಿಗೆ ರಾಜ್ ಬಿ ಶೆಟ್ಟಿ ಸಹಾಯ ಮಾಡಿದ್ದಾರೆ ಎಂದರು.  ಕಾಸರಗೋಡು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಆದರೆ ಕ್ರಮೇಣವಾಗಿ ಕಾಸರಗೋಡಿನಿಂದ ಕನ್ನಡದ ಬೋರ್ಡ್‍ಗಳು ಒಂದಾದ ನಂತರ ಒಂದರಂತೆ ಕಳಚುತ್ತಾ ಬಂದವು. ವಿಚಿತ್ರವೆಂದರೆ ಇವತ್ತು ಕಾಸರಗೋಡು ಕರ್ನಾಟಕದ ಭಾಗವಾಗಿ ಉಳಿದಿಲ್ಲ. ಈ ಚಿತ್ರದಲ್ಲಿ ಇತಿಹಾಸದ ಹಿನ್ನಲೆಯ ಜೊತೆ, ಸಾಂಸ್ಕøತಿಕ ನೆಲಗಟ್ಟನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ರಿಷಬ್. ಇದೊಂದು ನೈಜ ಕಥೆ. ಪರೆದೆಯ ಮೇಲೆಯೂ ಅತ್ಯಂತ ನೈಜವಾಗಿಯೇ ಮೂಡಿಬಂದಿದೆ. ರಿಷಬ್ ಹಾಗೂ ಪ್ರಗತಿ ಇಬ್ಬರು ಈ ಚಿತ್ರವನ್ನು ತುಂಬಾ ಶ್ರಮ ಪಟ್ಟು ನಿರ್ಮಿಸಿದ್ದಾರೆ.
ಇನ್ನೂ ಮಕ್ಕಳ ಜೊತೆ ಕೆಲಸ ಮಾಡಿದ ಅನುಭವ ನನ್ನನ್ನು ಕೂಡ ಪುಟ್ಟ ಹುಡುಗನಾಗಿ ಮಾಡಿತು. ಹಾಗಾಗಿ ಇಷ್ಟೂ ಶ್ರಮದಿಂದ ಮೂಡಿಬಂದಿರುವ ಚಿತ್ರವನ್ನು ಜನರು ಪ್ರೋತ್ಸಾಹಿಸಲಿ ಎಂದು ನಟ ಅನಂತ್‍ನಾಗ್ ಹೇಳಿದರು.  ಇಡೀ ತಂಡ ಹಾಜರಿದ್ದು ಚಿತ್ರದ ಅನುಭವಗಳನ್ನು ಹಂಚಿಕೊಂಡಿತು. ಇನ್ನೇನಿದ್ದರೂ ಈ ಸರ್ಕಾರಿ ಮಕ್ಕಳ ಕಥೆಯನ್ನು ತೆರೆ ಮೇಲೆ ನೋಡಬೇಕಷ್ಟೆ.

sarkarihiriyaprathamika

Facebook Comments

Sri Raghav

Admin