ನಾಲೆಯಲ್ಲಿ ಚಿರತೆ ಮೃತದೇಹ ಪತ್ತೆ, ಹೊಡೆದು ಕೊಂದಿರುವ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

 

Chitah--01ಮಂಡ್ಯ,ಆ.23-ನಾಲೆಯಲ್ಲಿ ಚಿರತೆಯ ಮೃತದೇಹ ತೇಲಿಬಂದಿದ್ದು, ಚಿರತೆಯನ್ನು ಹೊಡೆದು ಕೊಂದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಗಾಮಾನಹಳ್ಳಿಯ ಜಮೀನಿನ ಬಳಿ ಚಿರತೆಯೊಂದು ಅನುಮಾನಸ್ಪದವಾಗಿ ಸತ್ತು ಬಿದ್ದಿತ್ತು. ಇದೀಗ ನಾಲೆಯಲ್ಲಿ ಮತ್ತೊಂದು ಚಿರತೆ ಶವ ತೇಲಿಬಂದಿದ್ದು, ಎರಡನೇ ಪ್ರಕರಣ ಇದಾಗಿದೆ.

ನಾಲೆಯ ಮೂಲಕ ಹೆಬ್ಬಾಕವಾಡಿಯ ಸುತ್ತುಕಟ್ಟೆ ಬಳಿ ಚಿರತೆಯ ಮೃತದೇಹ ತೇಲಿಬಂದಿದ್ದು, ಕಿಡಿಗೇಡಿಗಳು ಚಿರತೆಯನ್ನು ಕೊಂದು ನಾಲೆಗೆ ಎಸೆದಿರುವ ಅನುಮಾನ ವ್ಯಕ್ತವಾಗಿದೆ. ಚಿರತೆಗಳ ಅನುಮಾನಾಸ್ಪದ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ನಾಲೆಯಿಂದ ಚಿರತೆಯನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರವೇ ಚಿರತೆ ಸಾವಿನ ಅಸಲಿ ಕಾರಣ ಹೊರಬರಲಿದೆ.

Facebook Comments

Sri Raghav

Admin