ತ್ಯಾಜ್ಯ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಟವರ್ ಏರಿ ಬಿಸಿ ಮುಟ್ಟಿಸಿದ ಯುವಕರು

ಈ ಸುದ್ದಿಯನ್ನು ಶೇರ್ ಮಾಡಿ

Tower-protest
ಚೆನ್ನೈ,ಆ.23- ರಸ್ತೆ ಪಕ್ಕದಲ್ಲಿ ತ್ಯಾಜ್ಯ ಸುರಿಯುವ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತ ಮೂವರು ಯುವಕರು ತಿರುಮಲೈ ಅಲ್ವಾಪುರಂ ಮುಖ್ಯರಸ್ತೆಯಲ್ಲಿ 150 ಅಡಿ ಎತ್ತರದ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದರು.  ಸ್ಥಳೀಯ ಪ್ರದೇಶದಲ್ಲಿ ತ್ಯಾಜ್ಯ ತಂದು ಸುರಿಯುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯುವಕರು, ತ್ಯಾಜ್ಯ ಸುರಿಯುವ ಲಾರಿ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದಿನಕರನ್(35), ಪ್ರಭಾಕರನ್(24) ಹಾಗೂ ವಿಕ್ರಮ್(36) ಎಂಬ ಯುವಕರು ಅಲ್ವಾಪುರಂ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಟವರ್ ಮುಂಜಾನೆ 6 ಗಂಟೆಗೆ ಏರಿ ಕುಳಿತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊ ಲೀಸರು, ಯುವಕರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ಕಸ ವಿಲೇವಾರಿಯಾಗಬೇಕು, ತ್ಯಾಜ್ಯ ತಂದು ಸುರಿಯುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಾಗ, ಪೊ ಲೀಸರು ಲಾರಿ ಚಾಲಕ ಅರೋಕಿಯಾ ರಾಜ(40) ಎಂಬಾತನನ್ನು ಬಂಧಿಸಿದ್ದಾರೆ. ನಂತರ ಟವರ್‍ನಿಂದ ಕೆಳಗಿಳದ ಯುವಕರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಮೂವರಲ್ಲಿ ದಿನಕರನ್ ಎಂಬಾತ ಅರೆ ಪ್ರಜಾ್ಞವಸ್ಥೆಯಲ್ಲಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ.

Facebook Comments

Sri Raghav

Admin