ಯುಪಿಎಸ್‍ಸಿಯಲ್ಲಿ ವಿವಿಧ ಉದ್ಯೋಗವಕಾಶಗಳು

ಈ ಸುದ್ದಿಯನ್ನು ಶೇರ್ ಮಾಡಿ

UPSC
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು ಉಪನ್ಯಾಸಕ, ಕಿರಿಯ ತಾಂತ್ರಿಕ ಅಧಿಕಾರಿ ಸೇರಿದಂತೆ ಇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 34
ಹುದ್ದೆಗಳ ವಿವರ
1.ಕಿರಿಯ ತಾಂತ್ರಿಕ ಅಧಿಕಾರಿ – 03
2.ಕಿರಿಯ ವೈಜ್ಞಾನಿಕಾಧಿಕಾರಿ – 02
3.ವಿಜ್ಞಾನಿ ‘ಬಿ’ (ಭೌತಶಾಸ್ತ್ರ) – 02
4.ಡೆಪ್ಯೂಟಿ ಲೆಜಿಸ್ಟ್ರೇಟೀವ್ ಕೌನ್ಸೆಲ್ – 04
5.ರಸಾಯನಶಾಸ್ತ್ರಜ್ಞ ಮತ್ತು ಲೋಹ ವಿಜ್ಞಾನಿ – 07
6.ಪ್ರಿನ್ಸಿಪಲ್ – 01
7.ಉಪನ್ಯಾಸಕರು – 09
8.ಉಪಪ್ರಾಂಶುಪಾಲರು – 06
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಇಂಜಿನಿಯರಿಂಗ್ ಪದವಿ, ಕ್ರ.ಸಂ 2ರ ಹುದ್ದೆಗೆ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ ಸಂ 3ರ ಹುದ್ದೆಗೆ ಸ್ನಾತಕೋತ್ತರ ಪದವಿ (ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ) ಕ್ರ ಸಂ 4ರ ಹುದ್ದೆಗೆ ಕಾನೂನು ಪದವಿ, ಕ್ರ ಸಂ 5ರ ಹುದ್ದೆಗೆ ಲೋಹ ವಿಜ್ಞಾನ ವಿಷಯದಲ್ಲಿ ಪದವಿ, ಕ್ರ ಸಂ 6ರ ಹುದ್ದೆಗೆ ಸಮುದ್ರದ ಸಾಮಥ್ರ್ಯ ಇಂಜಿನಿಯರ್ ಕೋರ್ಸ, ಕ್ರ ಸಂ 7ರ ಹುದ್ದೆಗೆ ಎಂಬಿಬಿಎಸ್/ ಎಂಎಲ್’ಟಿಯಲ್ಲಿ ಸ್ಯಾತಕೋತ್ತರ ಪದವಿ, ಕ್ರ ಸಂ 8ರ ಹುದ್ದೆಗೆ ಇಂಜಿನಿಯರಿಂಗ್ / ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1 ಮತ್ತು 2ರ ಹುದ್ದೆಗೆ ಗರಿಷ್ಠ 30 ವರ್ಷ, ಕ್ರ ಸಂ 3,7 ಮತ್ತು 8ರ ಹುದ್ದೆಗೆ 35, ಕ್ರ ಸಂ 4 ಮತ್ತು 6ರ ಹುದ್ದೆಗೆ 50 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂದವರಿಗೆ 5 ವರ್ಷಗಳ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿ ಮಾಡುವಂತೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-08-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.upsconline.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments