ಇಟ್ಟಿಗೆ ಗೂಡು ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ಕುಣಿಗಲ್,ಆ.24- ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗೂಡು ಕುಸಿದು ಇಬ್ಬರು ಕಾರ್ಮಿಕರು ಮರಣವನ್ನಪ್ಪಿ ಓರ್ವ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒರಿಸ್ಸಾ ಮೂಲದ ಜಮ್ಮೀಲಾಲ್ (65) ಪಿಂಕಿ (25) ಮೃತಪಟ್ಟವರು. ಗೌತಮ್ ಗಾಯಗೊಂಡ ಕಾರ್ಮಿಕ.

ಇವರು ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಆರ್.ಬ್ಯಾಡರಹಳ್ಳಿಯ ರಮೇಶ್ ಎಂಬುವರ ಕಿಟಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಟ್ಟಿಗೆ ಜೋಡಿಸಬೇಕಾದರೆ ಗೂಡು ಕುಸಿದು ಮೂವರು ಸಿಲುಕಿಕೊಂಡಿದ್ದರು. ತಕ್ಷಣವೇ ಕಾರ್ಮಿಕರು ಜಮ್ಮೀಲಾಲ್‍ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಮ್ಮೀಲಾಲ್ ಸಾವನ್ನಪ್ಪಿದ್ದಾರೆ. ಗೌತಮನನ್ನು ಕುಣಿಗಲ್ ಪಟ್ಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಸಂಬಂಧ ಹುಲಿಯೂರು ದುರ್ಗ ಠಾಣಾ ಪಿಎಸ್‍ಐ ಬಿ.ಪಿ. ಮಂಜು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin