ಲಾರಿಗೆ ಮದುವೆ ದಿಬ್ಬಣದ ಬೊಲೆರೋ ಡಿಕ್ಕಿ, ಸ್ಥಳದಲ್ಲೇ 6 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ASccident--01

ತುಮಕೂರು, ಆ.24- ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿ, 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಅನಂತಪುರ ಜಿಲ್ಲೆಯ ಪೆನುಗೊಂಡ ಗ್ರಾಮದ ಸತ್ತಾಪುರದಲ್ಲಿ ನಡೆದಿದೆ. ತಿಮ್ಮಾಪುರ ಗ್ರಾಮದ ಗೋಪಾಲ್‍ರೆಡ್ಡಿ (60), ರವೀಂದ್ರರೆಡ್ಡಿ (40), ಕೆ.ವೆಂಕಟಸ್ವಾಮಿ (65), ಒಡ್ಡಿ ಆಂಜನೇಯಲು (35), ಗೊಲ್ಲ ಆಂಜನೇಯಲು (35), ವೆಂಕಟಪ್ಪ (50) ಮೃತಪಟ್ಟವರು.

ವೈಎಸ್‍ಆರ್ ಪಕ್ಷದ ಮುಖಂಡ ಶ್ರೀಧರನಾರಾಯಣ ಎಂಬುವವರ ಪುತ್ರನ ಮದುವೆಗೆಂದು ಅನಂತಪುರಕ್ಕೆ ಬೊಲೆರೋ ಪಿಕಪ್ ವಾಹನದಲ್ಲಿ ತೆರಳುತ್ತಿದ್ದಾಗ ಧರ್ಮಾವರಂನಿಂದ ಬಾಳೆಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೆನುಗೊಂಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

tum--01

Facebook Comments

Sri Raghav

Admin