ವರ್ಷಾಂತ್ಯದಲ್ಲಿ ಕರಾವಳಿ ಪ್ರದೇಶಗಳಿಗೆ ಕಾದಿದೆ ದೊಡ್ಡ ಕಂಟಕ..!

ಈ ಸುದ್ದಿಯನ್ನು ಶೇರ್ ಮಾಡಿ

Coastal--01

ಮುಂಬೈ, ಆ.24- ಕೇರಳ, ಕರ್ನಾಟಕ ಸೇರಿದಂತೆ ದೇಶದ ಕೆಲವು ರಾಜ್ಯಗಳ ವಿನಾಶಕಾರಿ ಜಲಪ್ರಳಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷಾಂತ್ಯದಲ್ಲಿ ಹಲವೆಡೆ ಸುಮಾರು ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿದೇಶಗಳ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.  ಎಲ್ ನಿನೊ ಹೆಸರಿನ ಚಂಡಮಾರುತ ಅಕ್ಟೋಬರ್ ಮತ್ತು ನವೆಂಬರ್‍ನಲ್ಲಿ ತೀವ್ರ ಸ್ವರೂಪ ಪಡೆಯಲಿದ್ದು, ಡಿಸೆಂಬರ್ ವೇಳೆಗೆ ಜಪಾನ್‍ನಲ್ಲಿ ಪ್ರಚಂಡ ಮಳೆಯೊಂದಿಗೆ ಸಮುದ್ರದಲ್ಲಿ ಸುಂಟರಗಾಳಿಗೂ ಕಾರಣವಾಗಲಿದೆ. ಇದು ಭಾರತದ ಕರಾವಳಿ ಪ್ರದೇಶಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅಕ್ಯೂವೇದರ್ ಸಂಸ್ಥೆಯ ಉಷ್ಣವಲಯ ಹವಾಮಾನ ಪರಿಣಿತ ಡಾನ್ ಕೊಟ್ಲೋವ್‍ಸ್ಕಿ ಹೇಳಿದ್ದಾರೆ.

ಜಪಾನ್ ಮೇಲೆ ಅಪ್ಪಳಿಸಲಿರುವ ಎಲ್ ನಿನೋದಿಂದ ಭಾರತ ಸೇರಿದಂತೆ ಆಗ್ನೇಯ ದೇಶಗಳ ಪಶ್ಚಿಮ ಮತ್ತು ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಚಂಡಮಾರುತದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ವ್ಯತಿರಿಕ್ತವಾಗಿ ರಷ್ಯಾದ ವೋಲ್ಗಾ ಕಣಿವೆಯಲ್ಲಿ ಭಯಂಕರ ಕ್ಷಾಮ ತಲೆದೋರಲಿದೆ ಎಂದು ಅವರು ಮನ್ಸೂಚನೆ ನೀಡಿದ್ದಾರೆ.  ಡಿಸೆಂಬರ್ ಅಂತ್ಯದ ವೇಳೆಗೆ ಕರಾವಳಿ ತೀರದ ಪ್ರದೇಶಗಳಲ್ಲಿ 27 ಉಷ್ಣವಲಯ ಚಂಡಮಾರುತ, 16 ಪ್ರಬಲ ಚಂಡಮಾರುತ ಹಾಗೂ 6 ಅತ್ಯಂತ ಪ್ರಬಲ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ ಆರಂಭದಲ್ಲಿ ಮಂದವಾಗಿ ಬೀಸುವ ಎಲ್ ನಿನೊ ಕ್ರಮೇಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇದರಿಂದ ಪೆಸಿಫಿಕ್ ಸಾಗರದ ಅಂಚಿನ ಪ್ರದೇಶಗಳಲ್ಲಿ ಪ್ರಚಂಡ ಬಿರುಗಾಳಿಯಿಂದ ಧಾರಾಕಾರ ಮಳೆ ಸುರಿಯಲಿದೆ. ನಿರಂತರ ವರ್ಷಧಾರೆಯಿಂದ ಪ್ರವಾಹ ಪರಿಸ್ಥಿತಿಯೂ ತಲೆದೋರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin