ಇಂದಿನ ಪಂಚಾಗ ಮತ್ತು ರಾಶಿಫಲ (24-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಸಮಯಕ್ಕೆ ಸರಿ ಹೊಂದದ ಮಾತನ್ನು ಬೃಹಸ್ಪತಿ ಹೇಳಿದರೂ ಸಹ ಅವನಿಗೆ ಹೆಚ್ಚಾದ ತಿರಸ್ಕಾರವೂ ಅಪಮಾನವೂ ಸಂಭವಿಸುವುವು. -ಪಂಚತಂತ್ರ , ಮಿತ್ರಬೇಧ

Rashi
ಪಂಚಾಂಗ : 24.08.2018 ಶುಕ್ರವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಸಂ.5.14 / ಚಂದ್ರ ಅಸ್ತ ರಾ.5.01
ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ಮ.12.51)
ನಕ್ಷತ್ರ: ಉತ್ತರಾಷಾಢ (ಬೆ.6.48) / ಯೋಗ: ಸೌಭಾಗ್ಯ (ರಾ.7.11)
ಕರಣ: ತೈತಿಲ-ಗರಜೆ (ಮ.12.51-ರಾ.2.05) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 08

ಇಂದಿನ ವಿಶೇಷ: ಕುಜ ಅಂಗಾರಕ ಜಯಂತಿ ವಾಮನ ಜಯಂತಿ, ತಿರು ಓಣಂ ವರಮಹಾಲಕ್ಷ್ಮಿ ವ್ರತ

# ರಾಶಿ ಭವಿಷ್ಯ
ಮೇಷ: ಒಳ್ಳೆಯ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರುವವು.
ವೃಷಭ: ಕೆಲವು ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುವಿರಿ.
ಮಿಥುನ: ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವುದು.
ಕಟಕ: ಆರ್ಥಿಕ ಸಫಲತೆ ನಿಮ್ಮಲ್ಲಿ ಪೂರ್ಣ ಧೈರ್ಯ ತುಂಬುವುದು.
ಸಿಂಹ: ದಂಪತಿಯಲ್ಲಿ ವಿರಸ ತಲೆದೋರುವ ಸಾಧ್ಯತೆ ಇದೆ.
ಕನ್ಯಾ: ಮಹಿಳೆಯರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ಇರುವುದು ಒಳ್ಳೆಯದು.
ತುಲಾ: ರಕ್ತ ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಿ. ರಾಜಕೀಯ ಪಕ್ಷ ದಲ್ಲಿ ಉತ್ತಮ ಸ್ಥಾನ ಸಿಗುವುದು.
ವೃಶ್ಚಿಕ: ಮನೆಯಲ್ಲಿ ಸಣ್ಣಪುಟ್ಟ ವಸ್ತುಗಳು ಕಣ್ಮರೆಯಾಗಲಿದೆ.
ಧನಸ್ಸು: ನಿಮ್ಮ ಶಕ್ತಿ ಮೀರಿ ಕೆಲಸ ಮಾಡದಿರಿ.
ಮಕರ: ಸದ್ಯದಲ್ಲೇ ಶುಭ ಸಮಾಚಾರ ಕೇಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಕುಂಭ: ಕೃಷಿಕರಿಗೆ, ಕೈಗಾರಿಕೋದ್ಯಮಿಗಳಿಗೆ ಲಾಭ
ಮೀನ: ಸರ್ಕಾರಿ ಉನ್ನತಾಧಿಕಾರಿಗಳಿಗೆ ಸ್ಥಾನ ಪಲ್ಲಟವಾಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin