ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯದಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Departmen-oft-Industrial-Po
ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯದ ಕೈಗಾರಿಕೆಗಳ ನೀತಿ ಮತ್ತು ಪ್ರಚಾರ ವಿಭಾಗದಲ್ಲಿ ಹಕ್ಕು ಪತ್ರ ವಿನ್ಯಾಸದ ಪರೀಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 220
ಹುದ್ದೆಗಳ ವಿವರ
1.ಜೀವ ರಾಸಾಯನ ಶಾಸ್ತ್ರ – 06
2.ರಸಾಯನಶಾಸ್ತ್ರ – 45
3.ಪಾಲಿಮರ್ ವಿಜ್ಞಾನ – 04
4.ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 30
5.ಬಯೋ ಮೆಡಿಕಲ್ ಇಂಜಿನಿಯರಿಂಗ್ – 04
6.ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ – 55
7.ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ – 70
8.ಲೋಹ ವಿಜ್ಞಾನ (ಮೆಟಲರ್ಜಿಕಲ್) ಇಂಜಿನಿಯರಿಂಗ್ – 06
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದಗೆ ಜೀವರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಕ್ರ ಸಂ 2ರ ಹುದ್ದೆಗೆ ರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಕ್ರ ಸಂ 3ರ ಹುದ್ದಗೆ ಪಾಲಿಮರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಾಲಿಮರ್ ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಪದವಿ, ಕ್ರ ಸಂ 4ರ ಹುದ್ದೆಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್’ನಲ್ಲಿ ಪದವಿ, ಕ್ರ ಸಂ 5ರ ಹುದ್ದೆಗೆ ಬಯೋ ಮೆಡಿಕಲ್ ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಪದವಿ, ಕ್ರ ಸಂ 6ರ ಹುದ್ದೆಗೆ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಕ್ರ ಸಂ 7ರ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್’ನಲ್ಲಿ ಪದವಿ, ಕ್ರ ಸಂ 8ರ ಹುದ್ದೆಗೆ ಲೋಹ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 200 ರೂ ಶುಲ್ಕ ನಿಗದಿ ಮಾಡಲಾಗಿದ್ದು, ಪ.ಜಾ, ಪ.ಪಂ, ಪಿಹೆಚ್, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.cgpdtmrecruitment.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin