ಇತಿಹಾಸದಲ್ಲೇ ಮೊದಲ ಬಾರಿಗೆ ಗೊರವನಹಳ್ಳಿ ಲಕ್ಷ್ಮೀ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

Goravanahalli-Lakshmi-Templ

ತುಮಕೂರು, ಆ.24- ಇದೇ ಮೊದಲ ಬಾರಿಗೆ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನದ ಇತಿಹಾಸದಲ್ಲೇ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂತು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮಿ ದೇವಸ್ಥಾನವು ತನ್ನದೇ ಆದ ಭಕ್ತ ವೃಂದ ಹೊಂದಿದೆ.  ತುಮಕೂರು ಜಿಲ್ಲೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಮೈಸೂರು , ಮಂಡ್ಯ, ಕೋಲಾರ , ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಊರುಗಳಿಂದ ಭಕ್ತ ಸಮೂಹವೇ ಹರಿದು ಬರುತ್ತಿತ್ತು. ಶ್ರಾವಣ ಮಾಸದ ಆರಂಭದ ದಿನಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸನ್ನಿಧಿಗೆ ಆಗಮಿಸಿ ಲಕ್ಷ್ಮಿ ದೇವಿಯ ದರ್ಶನ ಪಡೆದಿದ್ದರು.

ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬರಲಿಲ್ಲ. ಒಂದು ಕಡೆ ತುಂತುರು ಮಳೆ ಮತ್ತೊಂದೆಡೆ ಒಂದು ಜನ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತದೆ ಎಂಬ ಭಾವನೆಯಿಂದಲೋ ಏನೋ ಭಕ್ತರು ಕಡಿಮೆಯಾಗಲು ಕಾರಣವಿರಬಹುದೆಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಆದರೂ ಸಹ ಇಂದು ಬೆಳಗ್ಗೆಯಿಂದಲೇ ಲಕ್ಷ್ಮಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

Facebook Comments

Sri Raghav

Admin