ಏಷ್ಯನ್ ಗೇಮ್ಸ್’ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ರೋಹನ್ ಬೋಪಣ್ಣ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Rohan--01
ಪಾಲೆಂಬಾಂಗ್, ಆ.24- ಏಷ್ಯನ್ ಗೇಮ್ಸ್ ನ ಡಬಲ್ಸ್ ಟೆನ್ನಿಸ್‍ನ ಫೈನಲ್ಸ್‍ನಲ್ಲಿ ನಿರೀಕ್ಷೆಯಂತೆ ಕನ್ನಡಿಗ ರೋಹನ್ ಬೋಪಣ್ಣ ಜೋಡಿಗೆ ಸ್ವರ್ಣ ಮುಕುಟ ಲಭಿಸಿದೆ. ಫೈನಲ್ಸ್‍ನ ಎರಡು ಸೆಟ್‍ಗಳಲ್ಲೂ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಶರಣ್ ಜೋಡಿಯು ಕಾಜಕೀಸ್ಥಾನ್‍ನ ಬುಬ್‍ಲಿಕ್ ಮತ್ತು ಡೇನಿಸ್ ಹೇವ್‍ಸೇಹೇವ್ ಜೋಡಿ ವಿರುದ್ಧ 6-3, 6-4 ನೇರ ಸೆಟ್‍ಗಳಿಂದ ಮಣಿಸುವ ಮೂಲಕ ಸ್ವರ್ಣ ಬೇಟೆಯಾಡಿದ್ದಾರೆ.

ಇದು ರೋಹನ್ ಬೋಪಣ್ಣ ಏಷ್ಯಾಡ್‍ನ ಡಬಲ್ಸ್‍ನಲ್ಲಿ ಗೆದ್ದ ಮೊದಲ ಸ್ವರ್ಣ ಪದಕವಾಗಿದೆ. ರೋಹನ್ ಬೋಪಣ್ಣ ಅವರು ತಮ್ಮ ಅದ್ಭುತ ಸರ್ವ್ ಹಾಗೂ ಕಲಾತ್ಮಕ ಆಟದ ನೆರವಿನಿಂದ ಮೊದಲ ಸುತ್ತಿನಲ್ಲಿ 20 ನಿಮಿಷಗಳಲ್ಲೇ 4-1 ಸೆಟ್ ಮುನ್ನಡೆ ಸಾಧಿಸುವ ಮೂಲಕ ಬಂಗಾರದ ಪದಕ ಗೆಲ್ಲುವ ಮುನ್ಸೂಚನೆ ನೀಡಿ ಮೊದಲ ಸೆಟ್‍ನಲ್ಲಿ 6-3 ರಿಂದ ಬೋಪಣ್ಣ ಜೋಡಿಯು ರೋಚಕ ಗೆಲುವು ಸಾಧಿಸಿತು.

ಪದಕ ಪಟ್ಟಿ
ಪದಕ ಪಟ್ಟಿ

ಮೊದಲ ಸೆಟ್‍ನಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಂತೆ ಎರಡನೇ ಸೆಟ್‍ನಲ್ಲಿ ಪ್ರದರ್ಶನ ನೀಡಿದ ಕಾಜಕೀಸ್ಥಾನ್ ಜೋಡಿಯು ಉತ್ತಮ ಹೋರಾಟ ಪ್ರದರ್ಶಿಸಿ 3-3ರಿಂದ ಸಮಬಲ ಸಾಧಿಸಿತ್ತಾದರೂ ಬೋಪಣ್ಣ ಜೋಡಿಯ ಉತ್ತಮ ಸರ್ವ್ ಹಾಗೂ ಆಕ್ರಮಣಕಾರಿ ಆಟದಿಂದ 6-4 ರಿಂದ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

52 ನಿಮಿಷಗಳ ಕಾಲ ಪಂದ್ಯದಲ್ಲಿ ಕನ್ನಡಿಗ ಬೋಪಣ್ಣ 40 ಸರ್ವ್‍ಗಳನ್ನು ಮಾಡಿದ್ದು ಕೂಡ ಭಾರತ ಸ್ವರ್ಣ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಟೆನ್ನಿಸ್‍ನ ಡಬಲ್ ವಿಭಾಗದಲ್ಲಿ ಭಾರತಕ್ಕೆ ಒಲಿದ 4ನೇ ಸ್ವರ್ಣ ಇದಾಗಿದೆ. ಇದಕ್ಕೂ ಮುನ್ನ ಸೋಮ್‍ದೇವ್ ದೇವನ್‍ವರ್ಮ ಹಾಗೂ ಸನಮ್ ಸಿಂಗ್ 2010ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ನಲ್ಲಿ ಸ್ವರ್ಣ ಗೆದ್ದಿದ್ದರೆ, ಮಹೇಶ್‍ಭೂಪತಿ ಹಾಗೂ ಲಿಯಾಂಡರ್‍ಪೇಸ್ ಜೋಡಿಯು 2002 ಹಾಗೂ 2006ರಲ್ಲಿ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದರೆ, 2014ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಸಕೇತ್ ಮೈನೇನಿ ಹಾಗೂ ಸನಮ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

Facebook Comments

Sri Raghav

Admin