ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಸ್ಕಾಟ್ ಮೊರಿಸನ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Scott--01

ಸಿಡ್ನಿ, ಆ.24-ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಲಿಬರಲ್ ಪಕ್ಷದ ನಾಯಕ ಸ್ಕಾಟ್ ಜಾನ್ ಮೊರಿಸನ್ ಚುನಾಯಿತರಾಗಿದ್ದಾರೆ. ಹಿಂದಿನ ಪ್ರಧಾನಮಂತ್ರಿ ಮ್ಯಾಕ್ಲಂ ಟರ್ನ್‍ಬುಲ್ ಸಂಪುಟದಲ್ಲಿ ಪರಿಸರ ಮತ್ತು ಇಂಧನ ಸಚಿವರಾಗಿದ್ದ ಜೋಶ್ ಫ್ರೈಡೆನ್‍ಬರ್ಗ್ ಉಪ ಲಿಬರಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನಿ ಹುದ್ದೆಗೆ ಪ್ರಬಲ ಪೈಪೋಟಿಯಾಗಿದ್ದ ಪೀಟರ್ ಡಟ್ಟನ್ ವಿರುದ್ಧ ಲಿಬರಲ್ ಪಕ್ಷದ ಕ್ಷಿಪ್ರ ಕ್ರಾಂತಿ ನಂತರ ಕಂಡು ಬಂದ ರಾಜಕೀಯ ಬೆಳವಣಿಗೆಯಲ್ಲಿ ಮೊರಿಸನ್‍ಗೆ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಹುದ್ದೆ ಒಲಿದಿದೆ. ಮಾಕ್ಲಂ ಟರ್ನ್‍ಬುಲ್ ಆಪ್ತರಾದ ಸ್ಕಾಟ್ ಮೊರಿಸನ್ ಚುನಾವಣೆಯಲ್ಲಿ (ಪಾರ್ಟಿ ರೂಮ್ ಬ್ಯಾಲಟ್ 45-40) ಜಯಸಾಧಿಸಿದರು.  ಟರ್ನ್‍ಬುಲ್ ಅವರ ಮತ್ತೊಬ್ಬ ಅಪ್ತ ಹಾಗೂ ವಿದೇಶಾಂಗ ಸಚಿವೆ ಜ್ಯೂಲಿ ಬಿಷಪ್ ಸಹ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿ ಕಣದಲ್ಲಿದ್ದರು. ಆದರೆ ಮೊದಲ ಸುತ್ತಿನ ಫಲಿತಾಂಶದಲ್ಲೇ ಅವರು ಪರಾಭವಗೊಂಡರು.

ಮೊರಿಸನ್ ಅವರ ಜಯವನ್ನು ಅಧಿಕೃತವಾಗಿ ಘೋಷಿಸಿದ ಲಿಬರಲ್ ಪಕ್ಷದ ಸಚೇತಕ ನೊಲಾ ಮಾರಿನೋ. ಪೀಟರ್ ಡಟ್ಟನ್ ವಿರುದ್ಧ ಸ್ಕಾಟ್ ಅವರು 45-40ರಲ್ಲಿ ಜಯ ಸಾಧಿಸಿದ್ದಾರೆ ಎಂದು ತಿಳಿಸಿದರು.

Facebook Comments

Sri Raghav

Admin