ಮಲ್ಲಪ್ಪೆರಿಯಾರ್ ಡ್ಯಾಂನಲ್ಲಿ 139 ಅಡಿಗಳಿಗೆ ನಿರ್ವಹಣೆ ಮಾಡುವಂತೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Mullaperiyar-dam
ನವದೆಹಲಿ (ಪಿಟಿಐ), ಆ.24- ಶತಮಾನದಲ್ಲೇ ಕಂಡು ಕೇಳರಿಯದ ಭಾರೀ ಮಳೆ ಮತ್ತು ಜಲಪ್ರಳಯದಿಂದ ಕಂಗೆಟ್ಟಿರುವ ಕೇರಳದ ವಿನಾಶಕಾರಿ ದುರಂತದ ದೃಷ್ಟಿಯಿಂದ ಆ.31ರವರೆಗೆ ಮಲ್ಲಪ್ಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು 139 ಅಡಿಗಳಿಗೆ ನಿರ್ವಹಣೆ ಮಾಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

ರಾಜ್ಯದಲ್ಲಿ ತಲೆದೋರಿರುವ ಪ್ರವಾಹಕ್ಕೆ ತಮಿಳುನಾಡು ಅಣೆಕಟ್ಟಿನಿಂದ ಬಿಟ್ಟಿರುವ ಅಗಾದ ಪ್ರಮಾಣದ ನೀರೇ ಕಾರಣ ಎಂದು ಕೇರಳ ಆರೋಪಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿರುವುದು ಇಲ್ಲಿ ಗಮನಾರ್ಹ. ಮುಖ್ಯ ನ್ಯಾ.ದೀಪಕ್ ಮಿಶ್ರಾ ಮತ್ತು ಹಿರಿಯ ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ರಾಜ್ಯದಲ್ಲಿನ ಅಣೆಕಟ್ಟೆಯಲ್ಲಿನ ನೀರಿನ ಮಟ್ಟದ ಬಗ್ಗೆ ನಿರಂತರ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ನೀರಿನ ಮಟ್ಟ ಹೆಚ್ಚಾಗಲು ಅವಕಾಶ ನೀಡಬಾರದು ಎಂದು ಸೂಚಿಸಿದೆ.

Facebook Comments

Sri Raghav

Admin