ನನಗೆ ವಾಗ್ದಂಡನೆ ವಿಧಿಸಿದರೆ ದೇಶದ ಆರ್ಥಿಕತೆ ಕುಸಿಯುತ್ತೆ : ಟ್ರಂಪ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Trump
ವಾಷಿಂಗ್ಟನ್, ಆ.24- ನನಗೆ ವಾಗ್ದಂಡನೆ ವಿಧಿಸಿದರೆ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ನೀಲಿ ಚಿತ್ರ ನಟಿ ಜತೆ ಟ್ರಂಪ್ ಸಂಬಂಧ ಹಾಗೂ ಆ ಪ್ರಕರಣ ಮರೆಮಾಚಲು ಆಕೆಗೆ ಅಮೆರಿಕ ಅಧ್ಯಕ್ಷರ ಪರವಾಗಿ ಹಣ ನೀಡಿದ್ದಾಗಿ ಮಾಜಿ ವಕೀಲ ಮೈಕೆಲ್ ಕೋಹನ್ ಇತ್ತೀಚೆಗಷ್ಟೆ ಹೇಳಿಕೆ ನೀಡಿ ಒಪ್ಪಿಕೊಂಡಿದ್ದರು. ಇದರಿಂದ ಟ್ರಂಪ್‍ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದ್ದು, ಅವರಿಗೆ ವಾಗ್ದಂಡನೆ (ಮಹಾ ಆಯೋಗ) ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ನನಗೆ ವಾಗ್ದಂಡನೆ ವಿಧಿಸಿದರೆ ದೇಶದ ಆರ್ಥಿಕತೆ ಕುಸಿದು ಅಮೆರಿಕನ್ನರು ಬಡವರಾಗುತ್ತಾರೆ ಎಂದು ಎಚ್ಚರಿಕೆ ನೀಡಿ ಪರೋಕ್ಷವಾಗಿ ಈ ಪ್ರತಿಕ್ರಿಯೆಗೆ ಸವಾಲು ಹಾಕಿದ್ದಾರೆ.

Facebook Comments

Sri Raghav

Admin