5000 ಕೋಟಿ ನೆರವಿಗೆ ಒತ್ತಾಯಿಸಿ 27ರಂದು ವಾಟಾಳ್ ರಾಜಭವನ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-nagraj
ಬೆಂಗಳೂರು,ಆ.24- ಕೊಡಗಿಗೆ ಪ್ರಧಾನಿ ಬರಬೇಕು ಹಾಗೂ ಕೇಂದ್ರ ಸರ್ಕಾರದಿಂದ 5 ಸಾವಿರ ಕೋಟಿ ನೆರವು ನೀಡಬೇಕೆಂದು ಒತ್ತಾಯಿಸಿ ಇದೇ 27ರಂದು ಬೆಳಗ್ಗೆ 11.30ಕ್ಕೆ ರಾಜಭವನ ಮುತ್ತಿಗೆ ಹಾಕುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ನವನಿರ್ಮಾಣಕ್ಕೆ ಪ್ರಧಾನಿ 5 ಸಾವಿರ ಕೋಟಿ ನೀಡಬೇಕು. ಅಲ್ಲಿನ ಜನರು ಎಲ್ಲವನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಕೊಡಗನ್ನು ನೈಜಸ್ಥಿತಿಗೆ ತರಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದರು.

ಮನೆ ಕಳೆದುಕೊಂಡವರಿಗೆ ತ್ವರಿತವಾಗಿ ಮನೆಗಳನ್ನು ಕಟ್ಟಿಸಿಕೊಡಬೇಕು. ಪ್ರತಿಯೊಬ್ಬರಿಗೂ ಸುಸಜ್ಜಿತವಾಗಿ ಮನೆಗಳನ್ನು ಹಂಚಬೇಕು ಹಾಗೂ ಭೂ ಕುಸಿತ ಆಗದಂತೆ ಆಧುನಿಕ ತಂತ್ರಜ್ಞಾನದಿಂದ ರಕ್ಷಿಸಬೇಕು. ಕಲಬೆರಕೆ ಔಷಧಿಗಳ ಬಳಕೆ ಬಗ್ಗೆ ಎಚ್ಚರವಹಿಸಬೇಕು ಎಂದರು.  ಕೊಡಗನ್ನು ಮತ್ತೆ ನೈಜ ಸ್ಥಿತಿಗೆ ತರಬೇಕಾದರೆ ಸಾವಿರಾರು ಕೋಟಿ ರೂ. ಅವಶ್ಯಕತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರ ನೀಡದಿದ್ದರೆ, ಪ್ರಧಾನಿ ಕೊಡಗಿಗೆ ಬರದೇ ಇದ್ದರೆ ಕರ್ನಾಟಕ ಬಂದ್ ಮಾಡಲಾಗುವುದು ಹಾಗೂ ಲೋಕಸಭಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Facebook Comments

Sri Raghav

Admin