ಹಿರಿಯ ಮರಾಠಿ ನಟ ವಿಜಯ್ ಚವಾಣ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Vijay--01

ಮುಂಬೈ,ಆ.24- ಮರಾಠಿ ಚಿತ್ರರಂಗದ ಹಿರಿಯ ನಟ ವಿಜಯ್ ಚವಾಣ್ ಇಂದು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.  350ಕ್ಕೂ ಹೆಚ್ಚು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಹಾಸ್ಯಮಯ ಪಾತ್ರಗಳಿಗೆ ಜೀವತುಂಬಿದ್ದರು. ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿ ವಿಜಯ್ ಗಮನಸೆಳೆದಿದ್ದರು.  ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರು ಮುಂಬೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 5 ಗಂಟೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯ ವಿಜಯ್ ಚವಾಣ್ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜಾತ್ರಾ, ಜಪಟ್‍ಲೆಲಾ, ಪಚಡ್‍ಲೆಲೆ, ಮುಂಬೈಚಾ ಡಬೆವಾಲಾ. ಮೊರು ಚಿ ಮವ್‍ಶೀ ಮತ್ತು ಶ್ರೀಮಂತ ದಾಮೋದರ ಪಂತ್ ಸಿನಿಮಾಗಳಲ್ಲಿ ಅವರ ಹಾಸ್ಯಪಾತ್ರಗಳು ಮರಾಠಿಗರ ಮನಗೆದ್ದಿವೆ.

Facebook Comments

Sri Raghav

Admin