ಕ್ಯಾಂಟರ್-ಸ್ಕಾರ್ಪಿಯೋ ನಡುವೆ ಭೀಕರ ಅಪಘಾತ, ಇಬ್ಬರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಚಿಂತಾಮಣಿ,ಆ.25- ಬೆಂಗಳೂರು ರಸ್ತೆಯ ವೈಜಕೂರು ಬಳಿ ಕ್ಯಾಂಟರ್ ಮತ್ತು ಸ್ಕಾರ್ಪಿಯೋ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸಾವುನನ್ನಪ್ಪಿದ್ದು , ಮತ್ತಿಬ್ಬರು ಗಾಯಗೊಂಡಿರುವ ಘಟನೆ ಇಂದು ಬೆಳಿಗಿನ ಜಾವ ಸಂಭವಿಸಿದೆ. ಸ್ಕಾರ್ಪಿಯೋದಲ್ಲಿದ್ದ ನೆರೆಯ ಅಂಧ್ರಪ್ರದೇಶದ ರಾಯಚೂಟಿಯ ಮನ್ಸೂರ್ (32) ಮತ್ತು ನೌಷದ್ (21) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಸ್ಕಾರ್ಪಿಯೋದಲ್ಲಿದ್ದ ಸಾಕೀರ್ (30) ತೀವ್ರ ಗಾಯವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿಯ ಎಂಬಿಎಸ್ ಪಾರ್ಸಲ್ ಸಾಗಾಣೆಕೆ ಮಾಡುವ ಕ್ಯಾಂಟರ್ ಚಾಲಕ ಸೈಯದ್ ಇಲಿಯಾಜ್ (35) ಎಂಬುವರ ತಲೆಗೆ ಪೆಟ್ಟಾಗಿದ್ದು ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸ್ಕಾರ್ಪಿಯೋ ವಾಹನದಲ್ಲಿದ್ದವರು ನೆರೆಯ ಅಂಧ್ರಪ್ರದೇಶದ ರಾಯಚೂಟಿಯಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.

ಎಂಬಿಎಸ್ ಪಾರ್ಸಲ್ ಸಾಗಾಣೆಕೆ ಮಾಡುವ ಕ್ಯಾಂಟರ್ ವಾಹನ ಬೆಂಗಳೂರಿನಿಂದ ಚಿಂತಾಮಣಿಗೆ ಪಾರ್ಸಲ್ ತುಂಬಿಕೊಂಡು ಬರುತ್ತಿದ್ದಾಗ ಬೆಳಗ್ಗೆ ಸುಮಾರು 8ಗಂಟೆಯಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯ ವೈಜಕೂರು ಬಳಿ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin