ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳುವುದು ಮಹಿಳೆಯರಿಗೆ ಅಗತ್ಯ : ಇಶಾ ಡಿಯೋಲ್

ಈ ಸುದ್ದಿಯನ್ನು ಶೇರ್ ಮಾಡಿ

isha-diol
ಬೆಂಗಳೂರು, ಆ.25- ಆಧುನಿಕ ಯುಗದಲ್ಲಿ ಮಹಿಳೆಯರು ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ ಎಂದು ಚಲನಚಿತ್ರ ನಟಿ ಇಶಾ ಡಿಯೋಲ್ ತಿಳಿಸಿದರು. ನಗರದ ಮಲ್ಲೇಶ್ವರಂ ಮಂತ್ರಿಮಾಲ್‍ನ ಐನಾಕ್ಸ್ ಆವರಣದಲ್ಲಿ ತಾವು ನಟಿಸಿರುವ ಕೇಕ್ ವಾಕ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ದೌರ್ಜನ್ಯನಡೆಯುತ್ತಿರುವುದು ಕೇಳುತ್ತಲೇ ಇದ್ದೇವೆ. ಹಾಗಾಗಿ ಮಹಿಳೆ ಸಾಹಸ ಪ್ರವೃತ್ತಿಯನ್ನು ರೂಢಿಸಿಕೊಂಡರೆ ಒಳಿತು ಎಂದರು.

ಕೇಕ್‍ವಾಕ್ ಸಿನಿಮಾದ ಬಗ್ಗೆ ಮಾತನಾಡಿದ ಅವರು, ಇದು 96 ನಿಮಿಷದ ಸಿನಿಮಾ ಆಗಿದೆ. ಇದರಲ್ಲಿ ತಮ್ಮದು ಅತ್ಯಂತ ಆಸಕ್ತಿದಾಯಕ ಪಾತ್ರವಾಗಿದೆ. ನಾವು ಹೋಗುವ ದಾರಿ ಅತಿಮುಖ್ಯವಾಗಿದೆ. ಎಲ್ಲ ಮಹಿಳೆಯರು ಕಥೆಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಮಹಿಳೆಯರು ಬಹುಮುಖ ಪ್ರತಿಭೆಯಿಂದ ಗಮನ ಸೆಳೆಯುತ್ತಾರೆ ಎಂದು ಹೇಳಿದರು.  ಒಟ್ಟಾರೆ ಸಿನಿಮಾ ಸೃಜನಶೀಲತೆಯನ್ನು ಹೊಂದಿದ್ದು, ನಿರ್ದೇಶಕ ರಾಮ್‍ಕಮಲ್ ಮುಖರ್ಜಿ ಅವರು ಸುಂದರವಾಗಿ ಚಿತ್ರಿಸಿದ್ದಾರೆ. ನಮ್ಮ ತಾಯಿ ಹೇಮಾಮಾಲಿನಿ ಶಾಸ್ತ್ರೀಯ ನೃತ್ಯ ಮಾಡುತ್ತಿದ್ದರು. ಅವರನ್ನು ನಾನು ಅನುಕರಣೆ ಮಾಡತ್ತಿದ್ದೇನೆ ಇದೇ ವೇಳೆ ತಿಳಿಸಿದರು.
ರಾಮ್‍ಕಮಲ್ ಮುಖರ್ಜಿ ಅವರು ಒಬ್ಬ ಪತ್ರಕರ್ತರು. ಅವರು ಜನಪ್ರತಿಯ ಕಥೆಗಳು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ ಎಂದರು.

Facebook Comments

Sri Raghav

Admin