ಏಷ್ಯನ್ ಗೇಮ್ಸ್’ನಲ್ಲಿ ಗೆದ್ದ ಚಿನ್ನದ ಪದಕವನ್ನು ಕೊಡಗು ಸಂತ್ರಸ್ತರಿಗೆ ಸಮರ್ಪಿಸಿದ ಬೋಪಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Rohan--Bopanna--01

ಜಕಾರ್ತ, ಆ.25- ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ನನ್ನ ಮನಸ್ಸಿಗೆ ನೋವುಂಟಾಗಿದ್ದು, ಏಷ್ಯನ್ ಗೇಮ್ಸ್ ನಲ್ಲಿ ಗಳಿಸಿದ ಚಿನ್ನದ ಪದಕವನ್ನು ಸಂತ್ರಸ್ತರಿಗೆ ಸಮರ್ಪಿಸುವುದಾಗಿ ಭಾರತದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಹೇಳಿದರು. ನಾನು ಏಷ್ಯನ್ ಗೇಮ್ಸ್‍ನಲ್ಲಿದ್ದರೂ ಸಹ ನನ್ನ ಮನಸ್ಸೆಲ್ಲ ಕೊಡಗಿನಲ್ಲಿಯೇ ಇದೆ. ಅಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ಸಾಕಷ್ಟು ಮಂದಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಬಹಳಷ್ಟು ನೋವುಂಟಾಗಿದೆ ಎಂದು ಹೇಳಿದ್ದಾರೆ.

ಕೊಡಗಿನ ಬಗ್ಗೆ ಹೆಚ್ಚಿನ ಪ್ರೀತಿ-ಕಾಳಜಿ ಇದೆ. ನಾನು ಏಷ್ಯನ್ ಗೇಮ್ಸ್‍ನಲ್ಲಿದ್ದರೂ ನಿತ್ಯ ಮನೆಗೆ ಫೋನ್ ಮಾಡಿ ಮಾಹಿತಿ ಪಡೆಯುತ್ತಿದ್ದೆ. ಮನೆಯವರು ಹೇಳುತ್ತಿದ್ದ ಮಾಹಿತಿ ಕೇಳಿ ಮನಸ್ಸಿಗೆ ತುಂಬ ನೋವುಂಟಾಗುತ್ತಿತ್ತು. ಹೀಗಾಗಿ ನಾನು ಏಷ್ಯನ್ ಗೇಮ್ಸ್‍ನಲ್ಲಿ ವಿಜೇತನಾಗಿ ಗಳಿಸಿರುವ ಚಿನ್ನದ ಪದಕವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

Facebook Comments

Sri Raghav

Admin