1984ರ ಸಿಖ್ ಹತ್ಯಾಕಾಂಡದ ತಪ್ಪಿತಸ್ಥರ ಶಿಕ್ಷೆಗೆ ರಾಹುಲ್ ಪೂರ್ಣ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ಲಂಡನ್ , (ಪಿಟಿಐ), ಆ.25-ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಂತರ 1984ರಲ್ಲಿ ಭುಗಿಲೆದ್ದ ಸಿಖ್ ಹತ್ಯಾಕಾಂಡವು ಅತ್ಯಂತ ನೋವಿನ ದುರಂತ ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಖ್ ಗಲಭೆಯಲ್ಲಿ ಯಾವುದೇ ಹಿಂಸಾಚಾರ ನಡೆಸಿದವರಿಗೆ ಶಿಕ್ಷೆ ವಿಧಿಸಲು ತಾವು ಶೇಕಡ 100ರಷ್ಟು ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಇಂದಿರಾಗಾಂಧಿ ಅವರನ್ನು ಸಿಖ್ ಅಂಗರಕ್ಷಕರು ಗುಂಡಿಟ್ಟು ಹತ್ಯೆ ಮಾಡಿದ ನಂತರ ಭುಗಿಲೆದ್ದ ಸಿಖ್ ವಿರೋಧಿ ಗಲಭೆಗಳಲ್ಲಿ 3,000ಕ್ಕೂ ಹೆಚ್ಚು ಸಿಖ್ಖರು ಹತರಾಗಿ ಅನೇಕರು ಗಾಯಗೊಂಡಿದ್ದರು. ಲಂಡನ್‍ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ನಿನ್ನೆ ನಡೆದ ಇಂಗ್ಲೆಂಡ್ ಮೂಲದ ಭಾರತೀಯ ಸಂಸದರು ಹಾಗೂ ಸ್ಥಳೀಯ ನಾಯಕರ ಸಭೆಯಲ್ಲಿ ಮಾತನಾಡಿ ಈ ವಿಷಯ ಪ್ರಸ್ತಾಪಿಸಿದರು.

ಸಿಖ್ ಸಮುದಾಯದ ವಿರುದ್ಧ ನಡೆದ ಗಲಭೆ, ಹಿಂಸಾಚಾರ ಮತ್ತು ಹತ್ಯಾಕಾಂಡವು ಅತ್ಯಂತ ಘೋರ ದುರಂತ. ಇದು ಯಮಯಾತನೆ. ಆದರೆ, ಇದರಲ್ಲಿ ಕಾಂಗ್ರೆಸ್ ಪಕ್ಷ ಶಾಮೀಲಾಗಿದೆ ಎಂಬ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.  ಯಾರ ವಿರುದ್ಧವೇ ಆಗಲಿ ಯಾರೂ ಕೂಡ ಯಾವುದೇ ಹಿಂಸಾಚಾರ ನಡೆಸಬಾರದು, ಅದು ತಪ್ಪು. ಈ ಪ್ರಕರಣಗಳ ಬಗ್ಗೆ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿವೆ. ಆ ಅವಧಿಯಲ್ಲಿ ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಬೇಕು. ಇದಕ್ಕೆ ನಾನು ಶೇ.100ರಷ್ಟು ಸಹಕಾರ-ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು. ಈ ವಿಷಯದಲ್ಲಿ ನನ್ನ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ. ಇದೊಂದು ದೊಡ್ಡ ದುರಂತ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ರಾಹುಲ್ ಗಾಂಧಿ ತಿಳಿಸಿದರು.

Facebook Comments

Sri Raghav

Admin