ತಾಯಿ-ಮಗುವಿನ ಮೇಲೆ ಹಂದಿ ದಾಳಿ, ನಗರಸಭೆ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Fig-attaced

ಗೌರಿಬಿದನೂರು, ಆ.25- ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹಂದಿ ದಾಳಿ ಮಾಡಿದ್ದು, ಮಗನನ್ನು ರಕ್ಷಿಸಲು ಹೋದ ತಾಯಿಯ ಮೇಲೂ ಹಂದಿ ದಾಳಿ ಮಾಡಿರುವ ಘಟನೆ ಜರುಗಿದೆ. ಪ್ರಣವ್ ಭಾರ್ಗವ್, ತಾಯಿ ಸುನಿತಾ ಹಂದಿಯಿಂದ ದಾಳಿಗೊಳಗಾದವರು.  ಹಿರೇಬಿದನೂರು ಗ್ರಾಮದ ಅಫಿಷಿಯಲ್ ಬಡಾವಣೆಯ ಸುನಿತಾ ತಮ್ಮ ಮನೆ ಮುಂದೆ ಬಟ್ಟೆ ಒಗೆಯುತ್ತಿದ್ದಾಗ ಮಗ ಭಾರ್ಗವ್ ಸೈಕಲ್ ತುಳಿಯುತ್ತಿದ್ದನು.ರಸ್ತೆಯಲ್ಲಿದ್ದ ಹಂದಿಗಳು ಭಾರ್ಗವ್‍ನನ್ನು ಏಕಾಏಕಿ ಅಟ್ಟಿಸಿಕೊಂಡು ಕಚ್ಚಲು ಮುಂದಾಗಿದ್ದು, ತಕ್ಷಣ ತಾಯಿ-ಮಗನನ್ನು ರಕ್ಷಿಸಿಕೊಳ್ಳಲು ಮುಂದಾದಾಗ ಇಬ್ಬರಿಗೂ ಹಂದಿ ಕಚ್ಚಿದ್ದು, ಇಬ್ಬರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತಂಕ: ಬಡಾವಣೆಯಲ್ಲಿ ತಾಯಿ-ಮಗುವಿಗೆ ಹಂದಿಗಳು ದಾಳಿ ಮಾಡಿರುವ ಘಟನೆಯಿಂದ ಈ ಭಾಗದ ನಾಗರಿಕರುಗಳಲ್ಲಿ ಆತಂಕ ಮೂಡಿದೆ.
ಹಂದಿಗಳ ಅಟ್ಟಹಾಸ: ನಗರದಲ್ಲಿ ಹಂದಿಗಳ ಅಟ್ಟಹಾಸ ಹೆಚ್ಚಾಗಿದ್ದು, ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ಒಡಾಡುತ್ತಿದ್ದು, ಈ ಬಗ್ಗೆ ನಗರಸಭೆ ಕ್ರಮಕ್ಕೆ ಮುಂದಾಗಬೇಕಿದೆ.
ಹಂದಿಗಳ ಹಾವಳಿ: ನಗರದಲ್ಲಿ ಹಂದಿಗಳ ಹಾವಳಿಗೆ ನಗರಸಭೆಯವರು ಕಡಿವಾಣ ಹಾಕದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ಅಧ್ಯಕ್ಷ ಜಿ.ಎಲ್. ಅಶ್ವತ್ಥನಾರಾಯಣ್ ಎಚ್ಚರಿಸಿದ್ದಾರೆ. ಈ ಸಂಬಂಧ ಹಂದಿ ದಾಳಿಗೊಳಗಾದ ತಾಯಿ ಸನಿತಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದಲ್ಲಿ ಹಂದಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ನಗರಸಭೆ ಮುಂದಾಗಿದ್ದು, ಈಗಾಗಲೇ ಹಂದಿ ಸಾಗಾಣಿಕೆದಾರರಿಗೆ ತಮ್ಮ ಹಂದಿ ಸಾಕಾಣಿಕೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿಕೊಳ್ಳವಂತೆ ಆದೇಶಿಸಲಾಗಿದ್ದು, ನಗರದಲ್ಲಿ ಹಂದಿಗಳು ಕಂಡು ಬಂದಲ್ಲಿ ಅವುಗಳನ್ನು ಹಿಡಿಯಲು ಸಿಬ್ಬಂದ್ದಿ ಸಿದ್ಧವಾಗಿದೆ ಎಂದು ನಗರಸಭಾಧ್ಯಕ್ಷ ಗೋಪಿನಾಥ್ ಪತ್ರಿಕೆಗೆ ತಿಳಿಸಿದ್ದಾರೆ.

Facebook Comments

Sri Raghav

Admin