ಕೊನೆಗೂ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ..! ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್

ಈ ಸುದ್ದಿಯನ್ನು ಶೇರ್ ಮಾಡಿ

Yash--1

ರಾಕಿಂಗ್ ಸ್ಟಾರ್ ಯಶ್ ಎರಡು ವರ್ಷಗಳ ನಂತರ ಕೊನೆಗೂ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲಿಗೆ ಕತ್ತರಿ ಹಾಕುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಗಡ್ಡ ತೆಗೆದ ಯಶ್ ಇನ್ನೂ ಚೆನ್ನಾಗಿ ಆಗಿ ಕಾಣುತ್ತಿದ್ದಾರೆ. ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.

ಯಶ್ ಕೆಜಿಎಫ್ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ತಲೆ ಕೂದಲನ್ನು ಬೆಳೆಸಿಕೊಂಡಿದ್ದರು. ಯಶ್ ಅವರ ಈ ಹೊಸ ವೇಷ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರೆ, ಕೆಲವು ಅಭಿಮಾನಿಗಳಿಗೆ ಅವರ ಲುಕ್ ಇಷ್ಟವಿರಲಿಲ್ಲ. ಅಲ್ಲದೇ ರಾಧಿಕಾ ಪಂಡಿತ್ ಅವರಿಗೂ ಯಶ್ ಅವರ ಈ ಲುಕ್ ಇಷ್ಟವಿರಲಿಲ್ಲ.  ವಿಡಿಯೋದಲ್ಲಿ ರಾಧಿಕಾ ಈಗ ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಜೊತೆ ನೀವೆಲ್ಲರೂ ಕಾಯುತ್ತಿರುವ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಎಂದು ನನಗೆ ನೆನಪಿಲ್ಲ. ಸದ್ಯ ಕಿರಾತಕ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿ ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

DlbFHerV4AAQ5lk

ಯಶ್ ಹೇಳಿದ್ದೇನು..?
ನನಗೆ ನನ್ನ ಗಡ್ಡ ತೆಗೆಯಲು ಇಷ್ಟವಿಲ್ಲ. ಏಕೆಂದರೆ ಎರಡು ವರ್ಷದಿಂದ ನನ್ನ ಗಡ್ಡ ನನ್ನ ಜೊತೆಯಲ್ಲೇ ಇತ್ತು. ಆದರೆ ನನ್ನ ಗಡ್ಡ ಬೇರೆಯವರಿಗೆ ಇಷ್ಟವಿಲ್ಲ. ಹಾಗಾಗಿ ನಾನು ಗಡ್ಡ ತೆಗೆಯುತ್ತಿದ್ದೀನಿ. ಗಡ್ಡ ಇರಲಿ ಎಂದು ನಿರ್ದೇಶಕರ ಹತ್ತಿರ ಮನವಿ ಮಾಡಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ಸದ್ಯ ನಾನು ಗಡ್ಡ ತೆಗೆಯುವುದರಿಂದ ಎಲ್ಲರಿಗೂ ಖುಷಿಯಾಗುತ್ತಿದೆ. ಆದರೆ ನನಗೆ ಬೇಜಾರ್ ಆಗುತ್ತಿದೆ ಎಂದು ಯಶ್ ಹೇಳಿದ್ದಾರೆ.

4-1535178750

DlbSUJmX4AAsVXh DlbSUJmXgAAZAj0

Facebook Comments

Sri Raghav

Admin