ಪಾಕ್ ಅಧ್ಯಕ್ಷ, ಪ್ರಧಾನಿ ದುಂದುವೆಚ್ಚಕ್ಕೆ ಇಮ್ರಾನ್ ಕತ್ತರಿ

ಈ ಸುದ್ದಿಯನ್ನು ಶೇರ್ ಮಾಡಿ

Imran-Khan--01

ಇಸ್ಲಾಮಾಬಾದ್ (ಪಿಟಿಐ), ಆ.25- ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನಮಂತ್ರಿ ಸೇರಿದಂತೆ ಪ್ರಮುಖ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ನಿಧಿಯನ್ನು ವಿವೇಚನಾರಹಿತವಾಗಿ ಖರ್ಚು ಮಾಡುವುದನ್ನು ನಿರ್ಬಂಧಿಸಲಾಗಿದೆ.

ಅಲ್ಲದೇ ಇವರ ಪ್ರಥಮ ದರ್ಜೆ ವಿಮಾನಯಾನಕ್ಕೂ ಲಗಾಮು ಹಾಕಲಾಗಿದೆ.   ನಿನ್ನೆ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಾರ್ತಾ ಮಂತ್ರಿ ಫವದ್ ಚೌಧರಿ ತಿಳಿಸಿದ್ದಾರೆ.

ಪಾಕಿಸ್ತಾನ ಅಧ್ಯಕ್ಷರು, ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸೆನೆಟ್ ಅಧ್ಯಕ್ಷರು, ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಹಾಗೂ ರಾಜ್ಯಗಳು/ಪ್ರಾಂತ್ಯಗಳ ಮುಖ್ಯಮಂತ್ರಿಗಳೂ ಸೇರಿದಂತೆ ಸರ್ಕಾರದ ಎಲ್ಲ ಉನ್ನತಾಧಿಕಾರಿಗಳು ಪ್ರಥಮ ದರ್ಜೆ ವಿಮಾನಯಾನ ಮಾಡುವಂತಿಲ್ಲ. ಇವರೆಲ್ಲರೂ ಕ್ಲಬ್/ಬ್ಯುಸಿನೆಸ್ ಕ್ಲಾಸ್‍ನಲ್ಲಿ ಮಾತ್ರ ಪ್ರಯಾಣಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin