ಲಂಚ ಪಡೆಯುವಾಗ ಸಬ್ ಇನ್ಸ್ ಪೆಕ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ACB
ಮಂಡ್ಯ, ಆ.25- ಅಪಘಾತ ಪ್ರಕರಣದಲ್ಲಿ ವಶಪಡಿಸಿ ಕೊಂಡಿದ್ದ ಲಾರಿ ಬಿಡಲು ಲಂಚ ಪಡೆಯುತ್ತಿದ್ದ ಶ್ರೀರಂಗ ಪಟ್ಟಣ ಠಾಣೆಯ ಪಿಎಸ್‍ಐ ಹಾಗೂ ಕಾನ್‍ಸ್ಟೆಬಲ್ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಲಾರಿ ಮಾಲೀಕ ಅರವಿಂದ್ ಎಂಬುವವರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪಿಎಸ್‍ಐ ಸುರೇಶ್ ಹಾಗೂ ಕಾನ್‍ಸ್ಟೆಬಲ್ ವೆಂಕಟೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಆ.20ರಂದು ಶ್ರೀರಂಗಪಟ್ಟಣ ಟೌನ್‍ನ ಆರ್‍ಎಂಸಿ ಗೇಟ್ ಬಳಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಸಂಬಂಧ ಈ ಎರಡೂ ವಾಹನಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಬಯಲಿನಲ್ಲಿ ತಂದು ಇಡಲಾಗಿತ್ತು. ಆದರೆ, ಈ ಬಗ್ಗೆ ಎಫ್‍ಐಆರ್ ದಾಖಲಾಗಿರಲಿಲ್ಲ. ಲಾರಿಯನ್ನು ಬಿಡಲು ಸಬ್‍ಇನ್ಸ್‍ಪೆಕ್ಟರ್ ಮತ್ತು ಕಾನ್‍ಸ್ಟೆಬಲ್ 60 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ತದನಂತರ 15 ಸಾವಿರ ರೂ. ಪಡೆಯಲು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರವಿಂದ್ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ರಾತ್ರಿ 8.30ರಲ್ಲಿ ಲಾರಿ ಮಾಲೀಕ ಅರವಿಂದ್‍ನಿಂದ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪಿಎಸ್‍ಐ ಮತ್ತು ಕಾನ್‍ಸ್ಟೆಬಲ್‍ನನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.

Facebook Comments