ಲೋಕಸಭಾ ಎಲೆಕ್ಷನ್’ಗೂ ಮುನ್ನ ಬಂತು ‘ನೇತಾ’ ಆ್ಯಪ್, ನಿಮ್ಮನ್ನಾಳುವ ನಾಯಕರಿಗೆ ರೇಟಿಂಗ್ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

Neta-App--011

ನವದೆಹಲಿ (ಪಿಟಿಐ), ಆ.25-ಮುಂಬರುವ ಲೋಕಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಈಗಿನಿಂದಲೇ ಬಿರುಸಾಗುತ್ತಿವೆ. ಚುನಾಯಿತ ನಾಯಕರಿಗೆ ಶ್ರೇಯಾಂಕ ನೀಡಲು ಹಾಗೂ ಅವರ ಸಾಧನೆ-ಸಾಮಥ್ರ್ಯಗಳನ್ನು ಪರಾಮರ್ಶಿಸಲು ಮತದಾರರಿಗೆ ಅವಕಾಶ ನೀಡುವ ಹೊಸ ಮೊಬೈಲ್ ಆ್ಯಪ್‍ವೊಂದನ್ನು ಯುವ ಉದ್ಯಮಿಯೊಬ್ಬರು ಸೃಷ್ಟಿಸಿದ್ದಾರೆ.

ಈ ಆ್ಯಪ್‍ಗೆ ನ್ಯಾಷನಲ್ ಎಲೆಕ್ಟ್ರೋಲ್ ಟ್ರಾನ್ಸ್‍ಫರ್ಮೇಷನ್ ಆ್ಯಪ್ ಅಥವಾ ನೇತಾ ಎಂದು ಹೆಸರಿಡಲಾಗಿದೆ. 27 ವರ್ಷದ ಉದ್ಯಮಿ ಪ್ರಥಮ ಮಿತ್ತಲ್ ಇದನ್ನು ಅಭಿವೃದ್ದಿಗೊಳಿಸಿದ್ದಾರೆ. ದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೇತಾ ಅ್ಯಪ್ ಅನಾವರಣಗೊಳಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮುಖರ್ಜಿ, ಸುಶಿಕ್ಷಿತ ಮತದಾರರು, ಉತ್ತಮ ನಾಯಕರು, ಉತ್ತರದಾಯಿತ್ವ ಹಾಗೂ ಸಂಪೂರ್ಣ ಪಾರದರ್ಶಕತೆ ಇಲ್ಲದೆ ಉತ್ತಮ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲು ಅಸಾಧ್ಯ ಎಂದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಇಲ್ಲಿ ಜಾತಿ, ಧರ್ಮ ಹಾಗೂ ಇತರೆ ಅಂಶಗಳನ್ನು ಪರಿಗಣಿಸಿ ಜನರು ಮತ ಹಾಕುತ್ತಾರೆ. ಇಂಥ ಸನ್ನಿವೇಶದಲ್ಲಿ ಜನರಿಗೆ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಲಭಿಸಲು ಇಂಥ ಸಾಧನಗಳು ನೆರವಾಗುತ್ತವೆ. ಇದು ಪಕ್ಷ ಮತ್ತು ಜನರಿಗೂ ಸಹಕಾರಿ ಎಂದು ಹೇಳಿದರು.

Neta-App--012

ಫ್ಲಿಪ್ಡ್ ಪ್ರೈವೇಟ್ ಲಿಮಿಟೆಡ್‍ನಿಂದ ಅಭಿವೃದ್ದಿಗೊಳಿಸಿರುವ ನೇತಾ ಆ್ಯಪ್, ಶಾಸಕರು ಮತ್ತು ಸಂಸದರಿಗೆ ರೇಟಿಂಗ್ ನೀಡಲು ಮತದಾರರಿಗೆ ಅವಕಾಶ ನೀಡುತ್ತದೆ. ದೇಶದಲ್ಲಿರುವ ಎಲ್ಲ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳ ಸಾಧನೆ-ಸಾಮಥ್ರ್ಯ ಮಾಪನ ಮಾಡಲು ಹಾಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಇದೊಂದು ಸಾಧನವಾಗಲಿದೆ ಎಂದು ಮಿತ್ತಲ್ ವಿವರಿಸಿದರು.

ಕೃತಕ ಬುದ್ದಿಮತ್ತೆ, ಸುಧಾರಿತ ಕ್ರಮಾವಳಿಗಳು, ಏಕ ಕಾಲದ ಪಾಸ್‍ವರ್ಡ್ ಹಾಗೂ ಆಧಾರ್ ಸಂಖ್ಯೆಗಳ ಸಂಯೋಜನೆಗಳನ್ನು ಬಳಸಿ ಇದನ್ನು ಅಭಿವೃದ್ದಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ಎಂಟು ತಿಂಗಳಲ್ಲಿ ದೇಶದಲ್ಲಿನ 543 ಲೋಕಸಭಾ ಕ್ಷೇತ್ರಗಳು ಹಾಗೂ 4,120 ವಿಧಾನಸಭಾ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳ 1.5 ಕೋಟಿ ಮತದಾರರ ರೇಟಿಂಗ್ ಮತ್ತು ಪರಾಮರ್ಶೆಯನ್ನು ಈ ಆ್ಯಪ್ ತನ್ನ ಬೀಟಾ ವರ್ಷನ್‍ನಲ್ಲಿ ಈಗಾಗಲೇ ವೀಕ್ಷಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್‍ನಲ್ಲಿ ಇದು ಲಭ್ಯವಿದ್ದು, 16 ಭಾಷೆಗಳಲ್ಲಿ ಮತದಾರರು ರೇಟಿಂಗ್ ಮಾಡಬಹುದಾಗಿದೆ.

Facebook Comments

Sri Raghav

Admin