ವಿಂಡ್‍ಸರ್ಫಿಂಗ್‍ನಲ್ಲಿ 11 ವಿಶ್ವದಾಖಲೆ ಸಾರಾಗೆ ಸರಿಸಾಟಿ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Ds
ಜಲಕ್ರೀಡೆಗಳು ರೋಚಕ-ಸಾಹಸಮಯ. ಫ್ಯೂರ್‍ಟೆವೆಂಚುರಾ ಎಂಬ ದ್ವೀಪದಲ್ಲಿ ನಡೆದ ಫ್ರೀಸ್ಟೈಲ್ ವಿಂಡ್ ಸರ್ಫಿಂಗ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅರುಬಾದ ಸಾರಾ-ಕ್ವಿಟ್ಟಾ ಆಫ್‍ರಿಂಗಾ ಸತತ 11ನೇ ಬಾರಿಗೆ ಜಯ ಸಾಧಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.  ಉತ್ತರ ಆಫ್ರಿಕಾದ ಲಾಸ್ ಪಾಲ್ಮಾಸ್ ಪ್ರಾಂತ್ಯದ ಕ್ಯಾನರಿ ದ್ವೀಪದ ಫ್ಯೂರ್‍ಟೆವೆಂಚುರಾದಲ್ಲಿ  ಫ್ರೀ ಸ್ಟೈಲ್ ವಿಂಡ್‍ಸರ್ಫಿಂಗ್ ವಿಶ್ವ ಚಾಂಪಿಯನ್‍ಶಿಪ್ ಸ್ಪರ್ಧೆ ನಡೆಯಿತು.

ಅರುಬಾದ 27 ವರ್ಷದ ಸಾರಾ ಕ್ವಿಟಾ ಆಫ್‍ರಿಂಗಾ ಈ ಬಾರಿಯೂ ವಿಶ್ವ ಚಾಂಪಿಯನ್ ಆದರು. ಇದು ಅವರ 11ನೇ ಸತತ ವಲ್ರ್ಡ್ ಟೈಟಲ್ ಪ್ರಶಸ್ತಿ. ಇದರೊಂದಿಗೆ ಹೊಸ ವಿಶ್ವ ದಾಖಲೆ ನಿರ್ಮಿಸಿದರು.  ಹಾಲೆಂಡ್‍ನ ಮಾಯ್‍ಕೆ ಹುವೆರ್‍ಮ್ಯಾನ್ ಸತತ ಮೂರನೇ ಬಾರಿ ರನ್ನರ್-ಅಪ್ ಪ್ರಶಸ್ತಿ ಪಡೆದರು. ನಾರ್ವೆಯ ಓಡಾ ಜೊಹಾನ್ನೆ ಬ್ರೊಡ್‍ಹೊಲ್ಟ್ ತೃತೀಯ ಸ್ಥಾನ ಗಳಿಸಿದರು.

ಪುರುಷರ ಸ್ಪರ್ಧೆಯಲ್ಲಿ ಹಾಲಿ ವಿಶ್ವಚಾಂಪಿಯನ್ ವೆನಿಜುವೆಲಾದ ಜೋಸ್ ಗೊಲ್ಲಿಟೊ ಎಸ್ಟ್ರೆಡೊ ಜಯ ಸಾಧಿಸಿದರು. ಫ್ರಾನ್ಸ್‍ನ ಅಡ್ರಿಯನ್ ಬೊಸ್ಸೊನ್ ಮತ್ತು ಬೆಲ್ಜಿಯಂನ ಯೆಂಟೆಲ್ ಕಾಯಿರ್ಸ್ ಅನುಕ್ರಮವಾಗಿ ಎರಡು  ಮತ್ತು ಮೂರನೇ ಸ್ಥಾನ ಪಡೆದರು.

Facebook Comments

Sri Raghav

Admin