ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಈ ಸೀಕ್ರೆಟ್ ಟ್ರಿಕ್ಸ್’ಗಳು ನಿಮಗೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Smart-Phone--01

ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಈ ಸೀಕ್ರೆಟ್ ಟ್ರಿಕ್ಸ್’ಗಳು ನಿಮಗೆ ಗೊತ್ತೇ..?
ಇಂದು ಬಹಳಷ್ಟು ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಟಾಯ್ಲೆಟ್ ಇಲ್ಲದವರೂ ಸಹ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ ಎಂದರೆ ಪರಿಸ್ಥಿತಿ ನಿಮಗೇ ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಫೋನ್ ಇಲ್ಲದೆ ಒಂದೇ ಒಂದು ದಿನ ಅಲ್ಲ ಒಂದು ಗಂಟೆ, ಒಂದು ನಿಮಿಷ ಸಹ ಯಾರೂ ಇರಲು ಸಾಧ್ಯವಿಲ್ಲ. ಅಷ್ಟೆಲ್ಲಾ ಸ್ಮಾರ್ಟ್‍ಫೋನ್ ನಮ್ಮ ಜೀವನ ಪ್ರಭಾವಿಸುತ್ತಿದೆ. ಆದರೆ ಕೆಳಗೆ ಕೊಟ್ಟಿರುವ ಕೆಲವು ಟಿಪ್ಸ್ ಪಾಲಿಸಿದರೆ ಅದರಿಂದ ಸ್ಮಾರ್ಟ್‍ಫೋನ್ ಬಳಸುವುದು ಇನ್ನಷ್ಟು ಸುಲಭವಾಗುತ್ತದೆ. ಹಾಗಿದ್ದರೆ ಆ ಟಿಪ್ಸ್ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಕೆಲವು ವಿಧದ ಗೇಮ್ಸ್ ಆಡುವಾಗ ಜಾಹೀರಾತುಗಳು ಕಾಣಿಸುತ್ತಿರುತ್ತವೆ. ಇದರಿಂದಾಗಿ ನಮಗೆ ತುಂಬಾ ತೊಂದರೆಯಾಗುತ್ತಿರುತ್ತದೆ. ಆ ರೀತಿ ಆಡ್ಸ್ ಕಾಣಿಸದೆ ಇರಬೇಕಾದರೆ ಫೋನನ್ನು ಏರೋಪ್ಲೇನ್ ಮೋಡಲ್ಲಿ ಇಡಬೇಕು. ಇದರಿಂದಾಗಿ ಗೇಮ್ಸ್ ಆಡುವಾಗ ಆಡ್ಸ್ ಕಾಣಿಸಲ್ಲ. ನಿತ್ಯ ನಾವು ಅನೇಕ ಸ್ಥಳಗಳಿಗೆ ಹೋಗುತ್ತಿರುತ್ತೇವೆ. ಮನೆ, ಕಚೇರಿ, ಫ್ರೆಂಡ್ಸ್ ಮನೆ, ಕಾಫಿ ಶಾಪ್, ಹೋಟೆಲ್, ಬಾರ್.. ಹೀಗೆ ಅನೇಕ ಸ್ಥಳಗಳಿಗೆ ಹೋಗುತ್ತೇವೆ. ಆದರೆ ಇಂದು ನಮಗೆ ಅನೇಕ ಕಡೆ ವೈಫೈ ಸಿಗುತ್ತದೆ. ಆದರೆ ಅವುಗಳ ಪಾಸ್‌ವರ್ಡ್ ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಈ ರೀತಿಯ ತೊಂದರೆ ಇಲ್ಲದೆ ಇರಬೇಕಾದ್ದರೆ Wifi Password Show ಎಂಬ ಆಂಡ್ರಾಯ್ಡ್ ಆಪನ್ನು ನಿಮ್ಮ ಆಂಡ್ರಾಯ್ಡ್ ಫೋನಲ್ಲಿ ಹಾಕಿಕೊಳ್ಳಿ. ಇದರಿಂದ ನೀವು ಮತ್ತೆ ಮತ್ತೆ ಕನೆಕ್ಟ್ ಆಗುವ ವೈಫೈಗಳ ಪಾಸ್‌ವರ್ಡ್ ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿರಲ್ಲ. ಅವೇ ಆಯಾ ಕನೆಕ್ಷನ್‌ಗಳ ಬಳಿ ಕಾಣಿಸುತ್ತವೆ.

ನಾವೀಗ ಹೇಳಲಿರುವ ಟಿಪ್ ಮಾತ್ರ ಐಫೋನ್ ಬಳಕೆದಾರರಿಗೆ. ಐಫೋನ್ ಬಳಸುವವರು ಒಮ್ಮೆ ತಮಗೆ ಬರುವ ಕರೆಗಳನ್ನು ಲಿಫ್ಟ್ ಮಾಡದಿದ್ದರೆ ಅದು ರಿಂಗ್ ಆಗಿ ಮಿಸ್ಡ್ ಕಾಲ್ ಆಗುತ್ತದೆ. ಆದರೆ ಆ ಕರೆ ಮಾಡಿದವರಿಗೆ ಆಟೋಮೆಟಿಕ್ ಆಗಿ ಮೆಸೇಜ್ ಹೋಗುವಂತೆ ಸೆಟ್ ಮಾಡಿಕೊಳ್ಳಬಹುದು. ಅದಕ್ಕಾಗಿ ಐಫೋನಲ್ಲಿ ಆಟೋಮೆಟಿಕ್ ಟೆಕ್ಸ್ಟ್ ರಿಪ್ಲೈ ಸೆಟ್ ಮಾಡಿಕೊಳ್ಳಬಹುದು. ಅದಕ್ಕೆ ಏನು ಮಾಡಬೇಕೆಂದರೆ ಸೆಟ್ಟಿಂಗ್‌ಗೆ ಹೋಗಿ ಫೋನ್ ವಿಭಾಗದಲ್ಲಿರುವ ರೆಸ್ಪಾಂಡ್ ವಿತ್ ಟೆಕ್ಸ್ಟ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಅದರಲ್ಲಿ ಯಾವುದಾದರೂ ಮೆಸೇಜ್ ಕ್ರಿಯೇಟ್ ಮಾಡಿ ಇಡಬೇಕು. ಸಾರಿ, ಐ ವಿಲ್ ಕಾಲ್ ಯು ಲೇಟರ್ ಎಂದೋ ಅಥವಾ ಐಯಾಮ್ ಇನ್ ಮೀಟಿಂಗ್ ಕಾಲ್ ಯು ಲೇಟರ್ ಎಂದು ನಿಮಗೆ ಸೂಕ್ತ ಎನ್ನಿಸಿದ್ದನ್ನು ಸೆಟ್ ಮಾಡಬೇಕು. ಇದರಿಂದ ಯಾವಾಗ ಮಿಸ್ಡ್ ಕಾಲ್ ಬಂದರೂ ಆಟೋಮೇಟಿಕ್ ಆಗಿ ಟೆಕ್ಸ್ಟ್ ರಿಪ್ಲೈ ಹೋಗುತ್ತದೆ. ಅದೂ ಸಹ ನೀವು ಸೆಟ್ ಮಾಡಿಕೊಂಡ ಪ್ರಕಾರ.

ಈ ಟಿಪ್ ಆಂಡ್ರಾಯ್ಡ್ ಬಳಕೆದಾರರಿಗೆ. ಆಂಡ್ರಾಯ್ಡ್ ಫೋನ್ ಬಳಸುವವರು ತಮ್ಮ ಫೋನನ್ನು ಇತರರಿಗೆ ಕೊಡುವ ಸಂದರ್ಭದಲ್ಲಿ ಅದರಲ್ಲಿರುವ ಸೆಟ್ಟಿಂಗ್ಸ್ ಆಪ್ಷನ್‌ನಲ್ಲಿ ಪ್ರೊಫೈಲ್ಸ್‌ನಲ್ಲಿ ಗೆಸ್ಟ್ ಮೋಡನ್ನು ಆನ್ ಮಾಡಿ, ಲಾಕ್ ಇಟ್ಟುಕೊಂಡು ಇತರರಿಗೆ ಕೊಡಬೇಕು. ಇದರಿಂದ ನಿಮ್ಮ ಫೋನನ್ನು ಸಂಪೂರ್ಣವಾಗಿ ಆಪರೇಟ್ ಮಾಡಲು ಆಗಲ್ಲ. ಆ ರೀತಿ ನಿಮ್ಮ ಡಾಟಾ ಸುರಕ್ಷಿತವಾಗಿರುತ್ತದೆ.

ಐಫೋನ್ ಬಳಸುತ್ತಿರುವ ಬಳಕೆದಾರರು ತಮ್ಮ ಫೋನ್ ಸಂಖ್ಯೆ ಹೊರಗಿನವರಿಗೆ ಗೊತ್ತಾಗಬಾರದು ಎಂದರೆ ಕರೆ ಮಾಡುವಾಗ ಫೋನ್ ನಂಬರ್‌ಗೆ ಮುಂಚೆ *#31# ಕೋಡನ್ನು ಎಂಟರ್ ಮಾಡಿದರೆ ಸಾಕು, ಯೂಸರ್ ಫೋನ್ ನಂಬರ್ ಹೊರಗಿನವರಿಗೆ ಕಾಣಿಸಲ್ಲ. ಅಷ್ಟೇ ಅಲ್ಲದೆ ಯಾವುದಾರೂ ನಿರ್ದಿಷ್ಟ ವ್ಯಕ್ತಿಗೆ ನಿಮ್ಮ ಫೋನ್ ನಂಬರ್ ಕಾಣಿಸಬಾರದು ಎಂದುಕೊಂಡರೆ ಆಗ ಡಯಲ್ ಮಾಡುವಾಗ ಫೋನ್ ನಂಬರ್‌ಗೆ ಮೊದಲು #31# ಕೋಡ್ ಎಂಟರ್ ಮಾಡಿದರೆ ಸಾಕು. ಅವರಿಗೆ ಮಾತ್ರ ನಿಮ್ಮ ನಂಬರ್ ಕಾಣಿಸಲ್ಲ.

ಐಫೋನ್ ಬಳಸುತ್ತಿರುವ ಯೂಸರ್‌ಗಳು ನಿರ್ದಿಷ್ಟ ಸಮಯಕ್ಕೆ ತಾವು ಕೇಳುತ್ತಿರುವ ಮ್ಯೂಸಿಕ್ ನಿಲ್ಲಬೇಕೆಂದರೆ ಟೈಮರ್ ಸೆಟ್ ಮಾಡಿಕೊಳ್ಳಬಹುದು. ಅದಕ್ಕಾಗಿ ಅವರು ಟೈಮರ್ ವಿಭಾಗಕ್ಕೆ ಹೋಗಿ ಮ್ಯೂಸಿಕ್ ಲೆಂತ್ ಸೆಟ್ ಮಾಡಿಕೊಳ್ಳಬೇಕು. ಇದರಿಂದ ಆ ಟೈಮ್ ಲೆಂತ್ ಮುಗಿಯುತ್ತಿದ್ದಂತೆ ಮ್ಯೂಸಿಕ್ ಆಟೋಮ್ಯಾಟಿಕ್ ಆಗಿ ನಿಲ್ಲುತ್ತದೆ.

ಐಫೋನ್ ಬಳಕೆದಾರರು ಕ್ಯಾಮೆರಾದಿಂದ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾಗ ಸಹ ಫೋಟೋಗಳನ್ನು ತೆಗೆಯಬಹುದು. ಅದಕ್ಕೆ ಅವರು ಏನು ಮಾಡಬೇಕೆಂದರೆ ವೀಡಿಯೋ ಶೂಟ್ ಆಗುವ ಸಮಯದಲ್ಲಿ ತೆರೆಯ ಮೇಲೆ ಕಾಣಿಸುವ ಶಟರ್ ಬಟನ್ ಟಚ್ ಮಾಡಿದರೆ ಸಾಕು, ಆಗ ಫೋಟೋ ಸ್ನಾಪ್ ಆಗುತ್ತದೆ.

ಇಂದು ಲಭ್ಯವಾಗುತ್ತಿರುವ ಅನೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬೀಮ್ ಎಂಬ ಆಪ್ ಲಭಿಸುತ್ತದೆ. ಈ ಆಪ್ ಇರುವ ಎರಡು ಫೋನ್‌ಗಳನ್ನು ಅಕ್ಕಪಕ್ಕ ಇಟ್ಟು ಈ ಆಪನ್ನು ಆನ್ ಮಾಡಿದರೆ ಸಾಕು, ಅವುಗಳಲ್ಲಿ ಇರುವ ಕಂಟೆಂಟನ್ನು ಸುಲಭವಾಗಿ ಷೇರ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ಗೂ ನಿಮ್ಮ ಕಂಪ್ಯೂಟರ್‌ಗೆ ಇರುವ ಯುಎಸ್‌ಬಿ ಕೀ ಬೋರ್ಡ್ ಅಥವಾ ಮೌಸ್ ಕನೆಕ್ಟ್ ಮಾಡಿಕೊಳ್ಳಬಹುದು. ಅದಕ್ಕೆ ಏನು ಮಾಡಬೇಕೆಂದರೆ ಯೂಎಸ್‌ಬಿ ಓಟಿಜಿ ಕೇಬಲ್ ಇರಬೇಕು. ಅದನ್ನು ಒಂದು ಕಡೆ ಫೋನ್‌ಗೆ ಕನೆಕ್ಟ್ ಮಾಡಬೇಕು. ಇನ್ನೊಂದು ಕಡೆ ಕೀಬೋರ್ಡ್ ಅಥವಾ ಮೌಸ್‌ಗೆ ಕನೆಕ್ಟ್ ಮಾಡಬೇಕು. ಈ ರೀತಿ ಕನೆಕ್ಟ್ ಮಾಡಿದ ಬಳಿಕ, ಕೀಬೋರ್ಡ್, ಮೌಸ್‌‍ಗಳನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬಳಸಬಹುದು. ಇದರಿಂದ ಟೈಪಿಂಗ್, ಕ್ಲಿಕಿಂಗ್ ನಂತಹ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

ಆಂಡ್ರಾಯ್ಡ್ ಫೋನ್‌ಗಳನ್ನು ಬಳಸುವವರಿಗೆ ಈ ಆಪ್ ಕೆಲಸಕ್ಕೆ ಬರುತ್ತದೆ. ಇದರ ಹೆಸರು ಸ್ಕ್ರೀನ್ ಲಾಕ್ – ಟೈಮ್ ಪಾಸ್‍ವರ್ಡ್. ಈ ಆಪ್ ಫೋನ್‌ನಲ್ಲಿ ಹಾಕಿಕೊಂಡರೆ, ಫೋನ್‌ನಲ್ಲಿರುವ ಟೈಮನ್ನೇ ಪಾಸ್‍ವರ್ಡ್ ಆಗಿ ಎಂಟರ್ ಮಾಡಿಕೊಳ್ಳಬಹುದು. ಅಂದರೆ ಉದಾಹರಣೆಗೆ ನಿಮ್ಮ ಫೋನಲ್ಲಿ ಸಮಯ 12.03 ಎಂದುಕೊಂಡರೆ.. ಆಗ 1203 ನಂಬರನ್ನು ಪಾಸ್ ವರ್ಡ್ ಆಗಿ ಎಂಟರ್ ಮಾಡಬೇಕಾಗುತ್ತದೆ. ಅದೇ ಟೈಮ್ ಬದಲಾದರೆ ಅದನ್ನು ಅನುಸರಿಸಿ ನಂಬರ್ ಎಂಟರ್ ಮಾಡಬೇಕು. ಈ ರೀತಿ ಆಗಾಗ ಟೈಮ್ ಬದಲಾಗುತ್ತಾ ಪಾಸ್‍ವರ್ಡ್ ಸಹ ಬದಲಾಗುತ್ತದೆ. ಇದರಿಂದ ಇತರರಿಗೆ ನಿಮ್ಮ ಪಾಸ್‌ವರ್ಡ್ ಅಷ್ಟು ಸುಲಭವಾಗಿ ಗೊತ್ತಾಗಲ್ಲ.

Facebook Comments

Sri Raghav

Admin