ವರಮಹಾಲಕ್ಷ್ಮಿ ಪೂಜೆಗಿಟ್ಟಿದ್ದ 40 ಸಾವಿರ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

varalakshimi-robber
ಬೆಂಗಳೂರು, ಆ.25- ವರಮಹಾಲಕ್ಷ್ಮಿ ಪೂಜೆಗೆಂದು ಇಟ್ಟಿದ್ದ ಹಣವನ್ನು ಕಳ್ಳ ಕಿಟಕಿ ಮೂಲಕ ಕೈ ತೂರಿಸಿ 40 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ಜೆಪಿ
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಪಿ ನಗರದ 11ನೆ ಕ್ರಾಸ್, ಆಕ್ಸ್‍ಫರ್ಡ್ ಶಾಲೆ ಬಳಿಯ ನಿವಾಸಿ ಚೇತನ್‍ಕುಮಾರ್ ಎಂಬುವವರ ಮನೆಯಲ್ಲಿ ನಿನ್ನೆ ವರಮಹಾಲಕ್ಷ್ಮಿ ಪೂಜೆ ಮಾಡಲಾಗಿತ್ತು.  ರಾತ್ರಿ ಸೆಕೆ ಎಂದು ಕಿಟಕಿ ತೆಗೆದು ಕುಟುಂಬದವರು ಮಲಗಿದ್ದರು. ಇಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕಳ್ಳ ಕಿಟಕಿ ಮೂಲಕ ಕೈ ತೂರಿಸಿ ಹಣ ತೆಗೆದುಕೊಳ್ಳುತ್ತಿದ್ದಾಗ ಚೇತನ್‍ಕುಮಾರ್ ಅವರಿಗೆ ಎಚ್ಚರವಾಗಿ ಕೂಗಿಕೊಂಡಿದ್ದಾರೆ. ಅಷ್ಟರಲ್ಲಿ ಕಳ್ಳ ಕೈಗೆ ಸಿಕ್ಕಿದ 40 ಸಾವಿರ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಚೇತನ್‍ಕುಮಾರ್ ಅವರು ಜೆಪಿ ನಗರ ಠಾಣೆಗೆ ದೂರು ನೀಡಿದ್ದಾರೆ.

Facebook Comments

Sri Raghav

Admin