ಕಾಶ್ಮೀರ ಸೇರಿ ಎಲ್ಲ ವಿವಾದಗಳ ಇತ್ಯರ್ಥಕ್ಕೆ ಪಾಕ್ ಸಿದ್ಧ : ಖುರೇಷಿ

ಈ ಸುದ್ದಿಯನ್ನು ಶೇರ್ ಮಾಡಿ

Khureshi--01

ಇಸ್ಲಾಮಾಬಾದ್ (ಪಿಟಿಐ), ಆ.25-ಭಾರತದೊಂದಿಗೆ ಸಂಬಂಧ ಸುಧಾರಣೆಯನ್ನು ಪಾಕಿಸ್ತಾನ ಬಯಸುತ್ತದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಷಿ, ಕಾಶ್ಮೀರ ಸೇರಿದಂತೆ ಇತ್ಯರ್ಥಕ್ಕಾಗಿ ಬಾಕಿ ಉಳಿದಿರುವ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಪ್ರಸ್ತುತ ಬಿಕ್ಕಟ್ಟು ಇದ್ದರೂ ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಹಿಂಜರಿಯದು ಎಂದು ಹೇಳಿದರು. ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಸಿದ್ದ. ಒಂದೇ ಕೈಯಿಂದ ಚಪ್ಪಾಳ ಅಸಾಧ್ಯ. ನಾವು ಸಕಾರಾತ್ಮಕ ನಿಲುವು ಹೊಂದಿದ್ದೇವೆ. ಈ ಬಗ್ಗೆ ಭಾರತದಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬ ಆಶಾಭಾವನೆ ನಮಗಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin